ಬಿಲಾಸ್ಪುರ್: ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಪಡೆದುಕೊಳ್ಳಲು ವಿಫಲರಾಗುತ್ತಾರೆ. ಕಾರಣ ಅವೈಜ್ಞಾನಿಕ ಬೇಸಾಯ ಪದ್ಧತಿ ಹಾಗೂ ಸಾಂಪ್ರದಾಯಿಕ ರೈತಗಾರಿಕೆ. ಆದರೆ, ಇಲ್ಲೊಬ್ಬ ರೈತ ಮಹಿಳೆ ತನ್ನ ಚಿಕ್ಕ ಭೂಮಿಯಲ್ಲೇ ಬರೋಬ್ಬರಿ 3 ಲಕ್ಷ ಆದಾಯ ಪಡೆದುಕೊಂಡಿದ್ದಾರೆ.
ಜಿಲ್ಲೆಯ ನಲ್ವಾಡ್ ಕೊಟ್ಲೂ ಗ್ರಾಮದಲ್ಲಿನ ಬಬಿತಾ ಕುಮಾರಿ ಕೃಷಿಯಲ್ಲಿ ಯಶಸ್ಸು ಕಂಡು ಕೊಂಡಿದ್ದಾರೆ. 24 'ಬಿಘಾಸ್' (ಸುಮಾರು 5 ಎಕರೆ) ಭೂಮಿಯನ್ನು ಹೊಂದಿರುವ ಇವರು ಈ ಭಾಗದ ರೈತರಿಗೆ ಮಾದರಿಯಾಗಿದ್ದಾರೆ.
ಖುತುವಿಗೆ ತಕ್ಕಂತೆ ಇವರು ತನ್ನ ಜಮೀನಿನಲ್ಲಿ ಬೆಳೆ ಬೆಳೆದಿದ್ದಾರೆ. 2019-20ರ ಖುತುವಿನಲ್ಲಿ ಬಬಿತಾ ತಮ್ಮ ಭೂಮಿಯಲ್ಲಿ ಹೂಕೋಸು, ಸಕ್ಕರೆ ಬೀಟ್ಗೆಡ್ಡೆ, ಕೋಸುಗಡ್ಡೆ, ಪಾಲಕ್ ಮತ್ತು ಇತರ ತರಕಾರಿಗಳನ್ನು ಬೆಳೆದಿದ್ದರು. ಇದು 1, 05,645 ರೂ. ಲಾಭ ತಂದುಕೊಟ್ಟರೆ, ಮತ್ತು ಖಾರೀಫ್ ಖುತುವಿನಲ್ಲಿ ಸೌತೆಕಾಯಿ, ಟೊಮೆಟೊ, ಬಟಲ್ ಗಾರ್ಡ್, ಹಸಿರು ಮೆಣಸಿನಕಾಯಿ ಮತ್ತು ಇತರ ತರಕಾರಿಗಳನ್ನು ಬೆಳೆದು ಹೆಚ್ಚಿನ ಲಾಭ ಗಳಿಸಿದ್ದಾರೆ.
2017 ರಲ್ಲಿ ಸರ್ಕಾರಿ ನೀರಾವರಿ ಯೋಜನೆಯಿಂದ ಬಬಿತಾ ಸೇರಿದಂತೆ ಅನೇಕ ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಗ್ರಾಮದ 51 ಕುಟುಂಬಗಳಿಗೆ ಈ ನೀರಾವರಿ ಯೋಜನೆ ಸಹಕಾರಿಯಾಗಿದೆ. ಹಾಗೆಯೇ ಈ ಮಹಿಳೆಯ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಇತರ ರೈತರು ಕೂಡ ಬೇಸಾಯ ಮಾಡಲು ಮುಂದಾಗಿದ್ದಾರೆ.