ಕರ್ನಾಟಕ

karnataka

ETV Bharat / bharat

ಏಷ್ಯನ್ಸ್​ ಗೇಮ್​​ ಬಂಗಾರ ವಿಜೇತೆ ಹಿಮಾಗೆ ಸರ್ಕಾರದ ಗೌರವ - ಹಿಮಾ ದಾಸ್​

ಅಸ್ಸೋಂ ಸರ್ಕಾರ ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಹಿಮಾ ದಾಸ್​ಗೆ ಡಿಎಸ್​​​ಪಿ ಹುದ್ದೆ ನೀಡಿ ಗೌರವಿಸಿದೆ.

Hima Das
ಹಿಮಾ ದಾಸ್​

By

Published : Mar 7, 2020, 1:03 PM IST

ಗುವಾಹಟಿ:ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಓಟದಿಂದ ಮೇರು ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಹಿಮಾ ದಾಸ್​ಗೆ ಅಸ್ಸೋಂ ಸರ್ಕಾರ ಡಿಎಸ್​​​ಪಿ ಹುದ್ದೆ ನೀಡಿ ಗೌರವ ಸಲ್ಲಿಕೆ ಮಾಡಿದೆ.

ಸರ್ಕಾರದ ಗೌರವಕ್ಕೆ ಓಟಗಾರ್ತಿ ಹಿಮಾ ದಾಸ್​ ಧನ್ಯವಾದವನ್ನೂ ಸಮರ್ಪಿಸಿದ್ದಾರೆ. ಈ ಸಂಬಂಧ ಸಿಎಂ ಸರ್ಬಾನಂದ್​ ಸೋನಾವಾಲ್​ಗೆ ಟ್ವೀಟ್ ಮಾಡಿರುವ ದಾಸ್​ ನಿಮ್ಮ ಗೌರವಕ್ಕೆ ನಾನು ಅಭಾರಿ ಎಂದಿದ್ದಾರೆ.

ಹಿಮಾದಾಸ್​​​ಗೆ ಉಪ ಪೊಲೀಸ್​ ವರಿಷ್ಠಾಧಿಕಾರಿ ಹುದ್ದೆ ನೀಡುವ ನಿರ್ಣಯವನ್ನ ಬಜೆಟ್​ ಅಧೀವೇಶನದಲ್ಲಿ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಮಾ ದಾಸ್​ ಸರಣಿ ಟ್ವೀಟ್ ಮಾಡಿ, ನಾನು ಮುಂಬರುವ ಕ್ರೀಡಾಕೂಟಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details