ಕರ್ನಾಟಕ

karnataka

ETV Bharat / bharat

ಎರಡು ವರ್ಷದ ಬಳಿಕ ಜಮ್ಮು-ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಪುನಾರಂಭ! - ಜಮ್ಮು-ಕಾಶ್ಮೀರದಲ್ಲಿ 4ಜಿ ಇಂಟರ್​ನೆಟ್​ ಸೇವೆ

ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ 4ಜಿ ಸೇವೆ ಜಾರಿಗೊಳಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಆಡಳಿತ ವಿಭಾಗ ಟ್ವೀಟ್ ಮಾಡಿ ಮಾಹಿತಿ ಹೊರಹಾಕಿದೆ.

4G News
4G News

By

Published : Feb 5, 2021, 8:23 PM IST

ಶ್ರೀನಗರ:ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ಧುಗೊಂಡ ಬಳಿಕ ಕಣಿವೆ ನಾಡಿನಲ್ಲಿ ಹೈಸ್ಪೀಡ್​​ 4ಜಿ ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಬರೋಬ್ಬರಿ 2 ವರ್ಷದ ಬಳಿಕ ಈ ಸೇವೆ ಪುನಾರಂಭಗೊಳಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಮತ್ತೆ 4ಜಿ ಅಂತರ್ಜಾಲ ಸೇವೆಗಳನ್ನು ಪುನರ್​ ಸ್ಥಾಪನೆ ಮಾಡಲು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕಳೆದ ಕೆಲ ದಿನಗಳ ಹಿಂದೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದರು. ಇದೀಗ ಜಮ್ಮು-ಕಾಶ್ಮೀರದಲ್ಲಿ 4ಜಿ ಅಂತರ್ಜಾಲ ಸೇವೆ ನೀಡಿರುವ ಕುರಿತು ಅಲ್ಲಿನ ಅಧಿಕಾರಿ ರೋಹಿತ್​ ಕನ್ಸಾಲ್​ ಟ್ವೀಟ್ ಮಾಡಿದ್ದಾರೆ.

ಓದಿ: ಜಮ್ಮು-ಕಾಶ್ಮೀರದಲ್ಲಿ ಸದ್ಯದ್ರಲ್ಲೇ ಹೈಸ್ಪೀಡ್ 4 ಜಿ ಇಂಟರ್​ನೆಟ್ ಲಭ್ಯ

ಭಯೋತ್ಪಾದಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 4ಜಿ ಸೇವೆ ಸ್ಥಗಿತಗೊಳಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸ್ಥಿತಿ ಸೂಕ್ಷ್ಮವಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಜನವರಿ ತಿಂಗಳಿಂದ 2ಜಿ ಇಂಟರ್ನೆಟ್ ಸೇವೆ ನೀಡಲಾಗಿತ್ತು.

ABOUT THE AUTHOR

...view details