ಸೋಂಕು ನಿಯಂತ್ರಿಸಲು ವಿಫಲ: ಗುಜರಾತ್, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ - Congress
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಗುಜರಾತ್ ಸರ್ಕಾರ ವಿಫವಾಗಿದೆ. ಹೀಗಾಗಿ, ಅಲ್ಲಿ ಮರಣ ಪ್ರಮಾಣ ಹೆಚ್ಚಳಗೊಂಡಿದೆ ಎಂದು ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ
By
Published : Jun 16, 2020, 1:46 PM IST
|
Updated : Jun 16, 2020, 2:08 PM IST
ನವದೆಹಲಿ: ಗುಜರಾತ್ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿರುವ ಸಂಸದ ರಾಹುಲ್ ಗಾಂಧಿ, ಕೊರೊನಾ ವೈರಸ್ ಕಾರಣದಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಮರಣ ಪ್ರಮಾಣ ದಾಖಲಿಸಿದೆ. ಅದರ ಕುರಿತು ಮಾಹಿತಿ ಬಹಿರಂಗಗೊಂಡಿದೆ ಎಂದು ಅವರು ಬಿಬಿಸಿ ಕಟ್ಟಿಂಗ್ಸ್ ಟ್ವೀಟ್ ಮಾಡಿ ಟೀಕಿಸಿದ್ದಾರೆ.
ರೋಗ ಹರಡುವುದನ್ನು ಗುಜರಾತ್ ಸಂಪೂರ್ಣ ವಿಫಲಗೊಂಡಿದೆ. ಅದರಿಂದಾಗಿಯೇ ಮರಣ ಪ್ರಮಾಣ ಹೆಚ್ಚಾಗಿದೆ. ಅಲ್ಲದೇ, ಕೊರೊನಾ ಪ್ರಕರಣಗಳಲ್ಲೂ ಭಾರತದಲ್ಲಿ ಗುಜರಾತ್ ನಾಲ್ಕನೇ ಸ್ಥಾನ ಪಡೆದಿದೆ ಎಂದಿದ್ದಾರೆ.
ಕೋವಿಡ್-19 ಮರಣ ಪ್ರಮಾಣ
ರಾಜ್ಯ
ಶೇಕಡವಾರು
ಗುಜರಾತ್
6.25%
ಮಹಾರಾಷ್ಟ್ರ
3.73%
ರಾಜಸ್ಥಾನ
2.32%
ಪಂಜಾಬ್
2.17%
ಪುದುಚೇರಿ
1.98%
ಜಾರ್ಖಾಡ್
0.5%
ಚತ್ತೀಸ್ಗಡ
0.35%
ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದರೂ, ಅಲ್ಲಿನ ಸಾವಿನ ಪ್ರಮಾಣ ಗುಜರಾತ್ನಿಂತ ಅರ್ಧದಷ್ಟು ಕಡಿಮೆ ಇದೆ. ಇಂದು ಬೆಳಗ್ಗೆವರೆಗೂ ರಾಜ್ಯದಲ್ಲಿ ಸಾವಿನ ಸಂಖ್ಯೆ 1,505 ಮುಟ್ಟಿದೆ. ಪ್ರಕರಣಗಳು 24,055 ಕ್ಕೆ ಏರಿದೆ. ಪ್ರತಿದಿನ ಸರಾಸರಿ 488 ಪ್ರಕರಣಗಳು ದಾಖಲಾಗುತ್ತಿವೆ ಎಂದು ಅಂಕಿ - ಅಂಶ ಸಮೇತ ಆರೋಪಿಸಿದ್ದಾರೆ.