ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವಿನ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದಾರೆ.
ದ್ವೇಶದ ಹಿಂದೆ ಮೋದಿ, ಶಾ ಅಡಗಿಕೊಂಡಿದ್ದಾರೆ.. ರಾಹುಲ್ ಕಿಡಿ - ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಮೊದಿ ಆರೋಪಿಸಿದ ನಂತರ ರಾಹುಲ್, ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.
![ದ್ವೇಶದ ಹಿಂದೆ ಮೋದಿ, ಶಾ ಅಡಗಿಕೊಂಡಿದ್ದಾರೆ.. ರಾಹುಲ್ ಕಿಡಿ ಮೋದಿ ವಿರುದ್ಧ ರಾಹುಲ್ ಕಿಡಿ,Rahul Gandhi attacks modi and Amit Shah](https://etvbharatimages.akamaized.net/etvbharat/prod-images/768-512-5460244-thumbnail-3x2-brm.jpg)
ಭಾರತೀಯ ಯುವಕರೆ ಮೋದಿ ಮತ್ತು ಅಮಿತ್ ಶಾ ನಿಮ್ಮ ಭವಿಷ್ಯವನ್ನು ನಾಶಮಾಡಿದ್ದಾರೆ. ಉದ್ಯೋಗ ಕೊರತೆ ಮತ್ತು ಆರ್ಥಿಕತೆಗೆ ಹಾನಿ ಮಾಡಿರುವ ಅವರಿಗೆ ನಿಮ್ಮ ಕೋಪವನ್ನು ಎದುರಿಸಲು ಸಾಧ್ಯವಿಲ್ಲ. ಹೀಗಾಗಿಯೆ ಅವರು ನಮ್ಮ ಪ್ರೀತಿಯ ಭಾರತವನ್ನು ವಿಭಜಿಸುತ್ತಿದ್ದು, ದ್ವೇಷದ ಹಿಂದೆ ಅಡಗಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದಲ್ಲಿ ಪೌರತ್ವ ವಂಚಿತ ಮುಸ್ಲಿಮರನ್ನು ನಿರ್ಬಂಧಿತ ಶಿಬಿರಗಳಲ್ಲಿ(detention camps) ಬಂಧಿಸಲಾಗುತ್ತದೆ ಎಂಬುದಾಗಿ ಕಾಂಗ್ರೆಸ್ ಮತ್ತವರ ಮೈತ್ರಿ ಪಕ್ಷದ ಸ್ನೇಹಿತರು ಹಾಗು ಕೆಲವು ನಗರ ನಕ್ಸಲರು ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ನಂತರ ರಾಹುಲ್ ಗಾಂಧಿ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದಾರೆ.