ಕೊಲ್ಹಾಪುರ (ಮಹಾರಾಷ್ಟ್ರ) : ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಸರಾಸರಿ 77.75 ಮಿ.ಮೀ ಮಳೆಯಾಗಿದೆ. ಭಾರಿ ಮಳೆ ಹಿನ್ನೆಲೆ, ರಾಧಾನಗರಿ ಅಣೆಕಟ್ಟಿನ ನಾಲ್ಕು ಸ್ವಯಂಚಾಲಿತ ಗೇಟ್‌ಗಳನ್ನು ತೆರೆಯಲಾಗಿದ್ದು, ಉಳಿದ ಮೂರು ಗೇಟ್‌ಗಳನ್ನೂ ತೆರೆಯುವ ಸಾಧ್ಯತೆಯಿದೆ.
ಅಣೆಕಟ್ಟಿನ ಎಲ್ಲಾ ಗೇಟ್‌ಗಳನ್ನು ತೆರೆದರೆ ಜಿಲ್ಲೆಯಲ್ಲಿ ಮತ್ತೊಂದು ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ, ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚಿಸಿದೆ. ಭೋಗಾವತಿ ನದಿ ಜಲಾನಯನ ಪ್ರದೇಶದ ರಾಧಾನಗರಿ ಅಣೆಕಟ್ಟಿನಿಂದ ಪ್ರಸ್ತುತ 7,300 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಭೋಗಾವತಿ ನದಿ ಪಂಚಗಂಗಾ ನದಿಯನ್ನು ಸೇರುತ್ತದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು ಕಳೆದ 24 ಗಂಟೆಗಳಲ್ಲಿ ಪಂಚಗಂಗಾ ನದಿಯ ನೀರಿನ ಮಟ್ಟ ಆರು ಅಡಿ ಹೆಚ್ಚಾಗಿದೆ ಮತ್ತು ರಾಜಾರಾಮ್ ಅಣೆಕಟ್ಟಿನ ನೀರಿನ ಮಟ್ಟ 37.5 ಅಡಿ ಹೆಚ್ಚಾಗಿದೆ. ಎಚ್ಚರಿಕೆ ಮಟ್ಟ 39 ಅಡಿ ಮತ್ತು ಅಪಾಯದ ಮಟ್ಟ 43 ಅಡಿಯಾಗಿದ್ದು, ಮಳೆ ಮುಂದುವರಿದರೆ, ಅಪಾಯದ ಮಟ್ಟವನ್ನು ಮೀರುವ ಸಾಧ್ಯತೆಯಿದೆ. ಕಳೆದ ವರ್ಷದ ನೆರೆ ಬಂದ ಹಿನ್ನೆಲೆ, ಈಗಾಗಲೇ ನಾಲ್ಕು ಎನ್‌ಡಿಆರ್‌ಎಫ್ ತಂಡಗಳು ಸಜ್ಜಾಗಿ ನಿಂತಿದೆ.
ದೂಧಗಂಗಾ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮಳೆ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನು ಜಿಲ್ಲೆಯ ಹಾತಕಣಂಗಲ್ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 25.25 ಮಿ.ಮೀ, ಶಿರೋಲ್ನಲ್ಲಿ 20.71 ಮಿ.ಮೀ, ಪನ್ಹಾಳಾದಲ್ಲಿ 69.43 ಮಿ.ಮೀ, ಶಾಹುವಾಡಿಯಲ್ಲಿ 73 ಮಿ.ಮೀ, ರಾಧಾನಗರಿಯಲ್ಲಿ 89 ಮಿ.ಮೀ, ಕರ್ವೀರ್ನಲ್ಲಿ 67.55 ಮಿ.ಮೀ, ಕಾಗಲ್ನಲ್ಲಿ 61.71 ಮಿ.ಮೀ, ಗಡಹಿಂಗ್ಲಜ್ನಲ್ಲಿ 60.43 ಮಿ.ಮೀ. ಭೂದರ್‌ಗಡ್‌ನಲ್ಲಿ 94.40 ಮಿ.ಮೀ, ಆಜರಾದಲ್ಲಿ 116.25 ಮಿ.ಮೀ, ಚಂದಗಡ್ನಲ್ಲಿ 130.83 ಮಿ.ಮೀ ಮತ್ತು ಗಗನ್‌ಬೌಡಾದಲ್ಲಿ 124.50 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಇತರ ಅಣೆಕಟ್ಟುಗಳಿಂದ ಹೊರ ಬಿಡಲಾದ ನೀರಿನ ಮಟ್ಟ ಹೀಗಿದೆ :ತುಲ್ಶಿ - 884 ಕ್ಯೂಸೆಕ್, ವರ್ಣ - 14,486 ಕ್ಯೂಸೆಕ್, ದೂಧ್ಗಂಗಾ - 12,950 ಕ್ಯೂಸೆಕ್, ಕಸಾರಿ - 1,750 ಕ್ಯೂಸೆಕ್, ಕಡ್ವಿ - 2,519 ಕ್ಯೂಸೆಕ್, ಕುಂಭಿ - 650 ಕ್ಯೂಸೆಕ್, ಪ್ಯಾಟ್ಗಾಂವ್ - 1,072 ಕ್ಯೂಸೆಕ್, ಜಂಗಮಹಟ್ಟಿ - 634 ಕ್ಯೂಸೆಕ್, ಘಟ್‌ಪ್ರಭಾ - 2,724 ಕ್ಯೂಸೆಕ್, ಜಂಬಾರೆ - 2,265 ಕ್ಯೂಸೆಕ್, ಕೋಡ್ - 818 ಕ್ಯೂಸೆಕ್.