ಮ್ಯಾಂಚೆಸ್ಟರ್: ಬರೋಬ್ಬರಿ 26 ವರ್ಷ ಕಳೆದಿದೆ. ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಗ್ರೌಂಡ್‌ನಲ್ಲಿ ಆಸೀಸ್‌ನ ಶೇನ್ ವಾರ್ನ್, ಇಂಗ್ಲೆಂಡ್‌ನ ಮೈಕ್ ಗ್ಯಾಟಿಂಗ್ ವಿಕೆಟ್‌ನ ಉರುಳಿಸಿದ್ದರು. ಲೆಗ್‌ಸ್ಪಿನ್ ಮಾಡಿದ್ದ ಬಾಲ್‌ನ ಮೈಕ್ ಗ್ಯಾಟಿಂಗ್ ತಡೆಯಲಾಗಿರಲಿಲ್ಲ. ಲೆಗ್‌ಸೈಡ್‌ನಿಂದ ಬಂದ ಬಾಲ್ ಆಫ್‌ಸೈಡ್ ಸ್ಪಂಪ್‌ನ ಬೇಲ್ಸ್ ಎಗರಿಸಿತ್ತು. ಅದೇ ಗ್ರೌಂಡ್‌ನಲ್ಲಿ ಪಾಕ್ ವಿರುದ್ಧದ ಸಂಡೇ ನಡೆದ ವಿಶ್ವಕಪ್ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಮಾಡಿದ್ದ ಬಾಲ್ ಆ ದಿನ ನೆನಪಿಸಿತು.
ವಾರ್ನ್ 'ಶತಮಾನದ ಬಾಲ್'ನ ನೆನಪಿಸಿದ ಕುಲ್‌ದೀಪ್ ಮೈಕ್ ಗ್ಯಾಟಿಂಗ್ ವಿಕೆಟ್ ಉರುಳಿಸಿದ್ದ ಶೇನ್ ವಾರ್ನ್ 'ಈ ಶತಮಾನದ ಬಾಲ್' ಹಾಕಿದ್ದರು. ಪಾಕ್‌ನ ಬಾಬರ್ ಅಜಮ್ ವಿಕೆಟ್ ಕೆಡವಿದ ಕುಲ್‌ದೀಪ್ ಮತ್ತೆ 'ಶತಮಾನದ ಬಾಲ್'ನ ಸ್ಮರಿಸುವಂತೆ ಮಾಡಿದರು ಅಂತಾ ಆಂಗ್ಲರ 'ದಿ ಟೈಮ್ಸ್ ಇನ್ ಲಂಡನ್' ಪತ್ರಿಕೆ, ಎಡಗೈ ಮಣಿಕಟ್ಟಿನ ಭಾರತದ ಸ್ಪಿನ್ನರ್‌ನ ಕೊಂಡಾಡಿದೆ.
ಶೇನ್ ವಾರ್ನ್ ಬಾಲ್ 14 ಡಿಗ್ರಿ, ಕುಲ್‌ದೀಪ್ 5.8 ಡಿಗ್ರಿ!
ವಾರ್ನ್ 'ಶತಮಾನದ ಬಾಲ್'ನ ನೆನಪಿಸಿದ ಕುಲ್‌ದೀಪ್
ಸೆಟ್ಟಾಗಿದ್ದ ಬಾಬರ್ ಅಜಮ್, ಕುಲದೀಪ್ ಬೌಲಿಂಗ್ ಅರ್ಥ ಮಾಡಿಕೊಳ್ಳದೇ ವಿಕೆಟ್ ಒಪ್ಪಿಸಿ ಗರ ಬಡಿದಂತಾಗಿದ್ದರು. 26 ವರ್ಷದ ಹಿಂದೆ ವಾರ್ನ್ ಬಾಲ್‌ನಲ್ಲಿ ವಿಕೆಟ್ ಕಳೆದುಕೊಂಡಿದ್ದ ಮೈಕ್ ಗ್ಯಾಟಿಂಗ್ ಕೂಡ ಶಾಕ್‌ಗೊಳಗಾಗಿದ್ದರು. ವಿಕೆಟ್‌ನಿಂದ ಹೊರಗಿದ್ದ ಬೌಲ್‌ನ ಅರಿಯದೇ ಬಾಬರ್ ಆಟವಾಡಿದ್ದರಿಂದ ಬಾಲ್ ಟರ್ನಾಗಿ ಆಫ್‌ಸ್ಟಂಪ್‌ನ ಎಗರಿಸಿತ್ತು. ಆಗ ವಾರ್ನ್ ಬಾಲ್ 14 ಡಿಗ್ರಿ ಟರ್ನಾಗಿತ್ತು. ಆದರೆ, ಕುಲ್‌ದೀಪ್ ಹಾಕಿದ್ದ ಈ ಬಾಲ್ 5.8 ಡಿಗ್ರಿ ಟರ್ನಾಗಿತ್ತು. ಓಲ್ಡ್ ಟ್ರಾಫರ್ಡ್‌ನ ಗ್ರೌಂಡ್‌ನಲ್ಲಿ ಬಾಲ್ ಈ ರೀತಿ ಟರ್ನ್ ತೆಗೆದುಕೊಳ್ಳುತ್ತೆ ಅಂತಾ ಪಾಕ್‌ನ ನಂ.3 ಬ್ಯಾಟ್ಸ್‌ಮೆನ್ ಬಾಬರ್ ಅಂದ್ಕೊಂಡಿರಲಿಲ್ಲ. ಅದಾದ 8 ಬಾಲ್ ಬಳಿಕ ಫಕರ್ ಜಮಾನ್ ಕುಲ್‌ದೀಪ್ ಬಲೆಗೆ ಬಿದ್ದರು.
IPlನಲ್ಲಿ ಬೆಂಚ್ ಕಾದಿದ್ದ ಚೀನಾಮ್ಯಾನ್ ಬಾಲರ್ ಈಗ ಹೀರೋ!
ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡಿದ್ದ ಕುಲ್‌ದೀಪ್ 9 ಪಂದ್ಯ ಆಡಿ 8.7ರ ಎಕನಾಮಿಯಲ್ಲಿ ಬರೀ 4 ವಿಕೆಟ್ ಗಳಿಸಿದ್ದರು. 5 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಹಾಗೇ ನೋಡಿದ್ರೇ ವರ್ಲ್‌ಕಪ್‌ಗೆ ಆಯ್ಕೆ ಆಗೋದೇ ಡೌಟಿತ್ತು. ಪಾಕ್ ಕೂಡ ಐಪಿಎಲ್ ಫಾರ್ಮ್ ನೋಡಿ ಒಂದು ಕ್ಷಣ ಮೈಮರೆತು, ಕುಲ್‌ದೀಪ್ ಸ್ಪಿನ್ ಜಾಲಕ್ಕೆ ಸಿಲುಕಿಕೊಂಡಿತು. ಕಲ್ಪಿಸಿಕೊಳ್ಳಲಾಗದಂತೆ ಸ್ಪಿನ್ ಮಾಡಲು ಶೇನ್ ವಾರ್ನ್ ಹೇಗೆ ಮಾಂತ್ರಿಕನೋ ಅದೇ ರೀತಿ ಚೀನಾಮ್ಯಾನ್ ಬೌಲರ್ ಕುಲ್‌ದೀಪ್ ಯಾದವ್‌ನ ಆಂಗ್ಲರ ಪತ್ರಿಕೆ ಹೊಗಳಿರೋದು ನಿಜಕ್ಕೂ ಗ್ರೇಟ್.