ಕರ್ನಾಟಕ

karnataka

ETV Bharat / bharat

ಪಲ್ಸರ್​ ​ಇಂಜಿನ್ ಬಳಸಿ ವಿಂಟೇಜ್​ ಕಾರು ತಯಾರಿಸಿದ ಯಂಗ್ ​ಮ್ಯಾನ್​! - Two Wheeler Was Transformed Into A Vintage Car in Maharastra

ಎಂಜಿನಿಯರಿಂಗ್ ಮೂರನೇ ವರ್ಷದಲ್ಲಿ ಓದುತ್ತಿರುವ ಯುವರಾಜ್, ಪಲ್ಸರ್​ ಬೈಕ್​ನ ಎಂಜಿನ್ ಹಾಗೂ ಮನೆಯ ವಸ್ತುಗಳನ್ನು ಬಳಸಿ ನಾಲ್ಕು ಚಕ್ರಗಳ ವಿಂಟೇಜ್ ಕಾರನ್ನು ನಿರ್ಮಿಸಿದ್ದಾರೆ. ತನ್ನ ಹೆತ್ತವರಿಗಾಗಿ ಈ ಕಾರನ್ನು ತಯಾರಿಸಿದ್ದಾನೆ ಈ ವಿದ್ಯಾರ್ಥಿ. ಮಗನ ಈ ಸಾಧನೆಗೆ ತಂದೆ-ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

Two Wheeler Was Transformed Into A Vintage Car
ಆಧುನಿಕ ವಿಂಟೇಜ್ ಕಾರು.!

By

Published : Nov 16, 2020, 6:03 AM IST

ಅಹ್ಮದ್‌ನಗರ: ರಿಮೋಟ್​​​​ನಿಂದ ಸ್ಟಾರ್ಟ್​ ಬಟನ್​ ಒತ್ತಿದರೆ ಸಾಕು ಶುರುವಾಗುತ್ತೆ ಈ ಕಾರು. ಅರೇ ಇದೇನಿದು ನೋಡ್ಲಿಕ್ಕೆ ವಿಂಟೇಜ್​ ಕಾರಿನ ಹಾಗಿದೆಯಲ್ಲಾ ಅಂತಾ ನಿಬ್ಬೆರಗಾಗಬೇಡಿ. ಹೌದು, ಇದು ವಿಂಟೇಜ್​ ಕಾರು. ಆದರೆ ಇದನ್ನು ಇದು ದ್ವಿಚಕ್ರ ವಾಹನದ ಇಂಜಿನ್​ ಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ.

ಆಧುನಿಕ ವಿಂಟೇಜ್ ಕಾರು.!

ಮಹಾರಾಷ್ಟ್ರದ ಅಹ್ಮದ್‌ನಗರದ ನಿಂಬಾರಿ ಗ್ರಾಮದ ಯುವರಾಜ್ ಜನಾರ್ದನ್ ಪವಾರ್ ಕಾರನ್ನು ತಯಾರಿಸಿದ್ದಾರೆ. ಎಂಜಿನಿಯರಿಂಗ್ ಮೂರನೇ ವರ್ಷದಲ್ಲಿ ಓದುತ್ತಿರುವ ಯುವರಾಜ್, ಪಲ್ಸರ್​ ಬೈಕ್​ನ ಇಂಜಿನ್ ಹಾಗೂ ಮನೆಯ ವಸ್ತುಗಳನ್ನು ಬಳಸಿ ನಾಲ್ಕು ಚಕ್ರಗಳ ವಿಂಟೇಜ್ ಕಾರನ್ನು ನಿರ್ಮಿಸಿದ್ದಾರೆ. 10 ನೇ ತರಗತಿಯಲ್ಲಿ ಓದುತ್ತಿರುವ ಅವರ ಸಹೋದರ ಪ್ರತಾಪ್ ಯುವರಾಜ್​ಗೆ ಈ ಕೆಲಸದಲ್ಲಿ ಸಹಾಯ ಮಾಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ 1500 ಸಿಸಿ ಬೈಕ್​ನ್ನು ವಿಂಟೇಜ್ ಕಾರ್ ಆಗಿ ಪರಿವರ್ತಿಸಿದ್ದಾರೆ.

ದ್ವಿಚಕ್ರ ವಾಹನದ ಇಂಜಿನ್​ ಹೊಂದಿದ್ದರೂ ಈ ಕಾರನ್ನು ರಿವರ್ಸ್ ಗೇರ್‌ನಲ್ಲಿ ಹಾಕಬಹುದು. 4 ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ.

ಯುವರಾಜ್ ಅವರ ಈ ಸಾಧನೆ ಹಲವು ಯುವಕರಿಗೆ ಸ್ಫೂರ್ತಿ ನೀಡಿದೆ. ಇವರ ಸಾಧನೆಗೆ ತಂದೆ - ತಾಯಿ ಹಾಗೂ ಮನೆಯವರು ಸಂತಸ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details