ರಾಂಚಿ(ಜಾರ್ಖಂಡ್): ಜೆಎಂಎಂ ಪಕ್ಷದ ನಾಯಕ ಹೇಮಂತ್ ಸೋರೆನ್ ಇಂದು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜೆವಿಎಂ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿಯನ್ನು ಭೇಟಿಯಾದರು.
ಹೇಮಂತ್ ಸೋರೆನ್ಗೆ ಬೆಂಬಲದ ಭರವಸೆ ನೀಡಿದ ಜೆವಿಎಂ ಮುಖ್ಯಸ್ಥ! - ಹೇಮಂತ್ ಸೋರೆನ್ಗೆ ಬೆಂಬಲದ ಭರವಸೆ ನೀಡಿದ ಜೆವಿಎಂ ಮುಖ್ಯಸ್ಥ
ಜಾರ್ಖಂಡ್ ವಿಕಾಸ್ ಮೋರ್ಛಾ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿ, ನಮ್ಮ ಪಕ್ಷವು ನಿಸ್ಸದೇಹವಾಗಿ ಹೇಮಂತ್ ಅವರನ್ನು ಬೆಂಬಲಿಸುತ್ತದೆ. ಅವರು ಅಗತ್ಯ ಬಹುಮತವನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಹೇಮಂತ್ ಸೋರೆನ್ಗೆ ಬೆಂಬಲದ ಭರವಸೆ ನೀಡಿದ ಜೆವಿಎಂ ಮುಖ್ಯಸ್ಥ
ನಿನ್ನೆಯಷ್ಟೇ ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಹಾಗೂ ಜೆಎಂಎಂ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಸರ್ಕಾರ ನಡೆಸಲು ಸಿದ್ಧತೆ ನಡೆಸುತ್ತಿದೆ. ಜೆಎಂಎಂ ಪಕ್ಷದ ನಾಯಕ ಹೇಮಂತ್ ಸೋರೆನ್ ಮುಖ್ಯಮಂತ್ರಿ ಸ್ಥಾನಕ್ಕೇರಲು ಸಿದ್ಧರಾಗಿದ್ದು, ಇದಕ್ಕೂ ಮುಂಚೆ ಬಾಬುಲಾಲ್ ಮರಾಂಡಿರನ್ನು ಭೇಟಿ ಮಾಡಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಜಾರ್ಖಂಡ್ ವಿಕಾಸ್ ಮೋರ್ಛಾ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿ, ನಮ್ಮ ಪಕ್ಷವು ನಿಸ್ಸದೇಹವಾಗಿ ಹೇಮಂತ್ ಅವರನ್ನು ಬೆಂಬಲಿಸುತ್ತದೆ. ಅವರು ಅಗತ್ಯ ಬಹುಮತವನ್ನು ಪಡೆದಿದ್ದಾರೆ ಎಂದು ಹೇಳಿದರು.