ಮುಂಬೈ:ಯುಗಾದಿ ಹಬ್ಬವನ್ನುಎಲ್ಲರೂ ತಮ್ಮ ಮನೆಗಳಲ್ಲಿಯೇ ಆಚರಿಸಬೇಕೆಂದು ಬಾಲಿವುಡ್ ಹಿರಿಯ ನಟಿಯರಾದ ಹೇಮಾಮಾಲಿನಿ ಹಾಗೂ ಊರ್ಮಿಳಾ ಮಾತೋಂಡ್ಕರ್ ಮನವಿ ಮಾಡಿದ್ದಾರೆ. ಟ್ವಿಟರ್ನಲ್ಲಿ ಮನವಿ ಮಾಡಿರುವ ಅವರು, ಕೊರೊನಾ ಮಹಾಮಾರಿ ವಿರುದ್ಧ ಎಲ್ಲರೂ ಜಾಗ್ರತೆವಹಿಸುವಂತೆ ಸಲಹೆ ನೀಡಿದ್ದಾರೆ. ಬಿಜೆಪಿ ಸಂಸದೆ ಹೇಮಾಮಾಲಿನಿ ಗುಡಿ ಪಡ್ವಾ, ಯುಗಾದಿ ಹಾಗೂ ಚೆತಿ ಛಾಂದ್ ಹಬ್ಬಗಳನ್ನೂ ಮನೆಯಲ್ಲಿಯೇ ಆಚರಿಸೋಣ ಎಂದಿದ್ದಾರೆ.
ನಿಮ್ಮ ಮನೆಗಳಲ್ಲೇ ಹಬ್ಬ ಆಚರಿಸಿ ಎಂದು ಹೇಮಾ ಮಾಲಿನಿ, ಊರ್ಮಿಳಾ ಮನವಿ.. - ಕೋವಿಡ್ -19
ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ಹಬ್ಬಗಳನ್ನು ಮನೆಗಳಲ್ಲಿಯೇ ಆಚರಿಸಿ ಸುರಕ್ಷಿತವಾಗಿರಿ ಎಂದು ಬಾಲಿವುಡ್ನ ಹಿರಿಯ ನಟಿಯರು ಮನವಿ ಮಾಡಿದ್ದಾರೆ.
ಹೇಮಮಾಲಿನಿ, ಊರ್ಮಿಳಾ ಮಾತ್ಕೊಂಡ್ಕರ್
ಕಾಂಗ್ರೆಸ್ ಪಕ್ಷದ ಮುಖಂಡೆಯಾಗಿರುವ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಟ್ವೀಟ್ ಮಾಡಿ ದುಷ್ಟಶಕ್ತಿಗಳ ನಿರ್ಮೂಲನೆಗಾಗಿ ಹಬ್ಬಗಳನ್ನು ಆಚರಿಸುತ್ತಿದ್ದು, ಮನೆಯಲ್ಲಿಯೇ ಹಬ್ಬಗಳನ್ನು ಆಚರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಕೊರೊನಾ ಮಹಾಮಾರಿ ಹರಡದಂತೆ ತಡೆಯಲು ಪ್ರಧಾನಿ ಮೋದಿ ದೇಶವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಇದೇ ಕಾರಣದಿಂದ ಎಲ್ಲರೂ ತಮ್ಮ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸಿ ಸುರಕ್ಷಿತವಾಗಿರಬೇಕೆಂದು ಬಾಲಿವುಡ್ ಕಲಾವಿದರು ಮನವಿ ಮಾಡಿದ್ದಾರೆ.