ಮಥುರಾ:ಬಿಜೆಪಿಯ ಮಥುರಾ ಕ್ಷೇತ್ರದ ಅಭ್ಯರ್ಥಿ ಹೇಮಾ ಮಾಲಿನಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಭತ್ತದ ಗದ್ದೆಗಿಳಿದು ಬೆಳೆ ಕೊಯ್ಲು ಮಾಡಿ ತೆನೆ ಹೊತ್ತಿದ್ದ ಸಂಸದೆ, ಈಗ ಗದ್ದೆವೊಂದರಲ್ಲಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.
ವೋಟ್ಗಾಗಿ ಹೇಮಾ ಮಾಲಿನಿ ಟ್ರ್ಯಾಕ್ಟರ್ ಏರಿ ರೈತ ಮಹಿಳೆ ಪೋಸು.. ಆಡಿಕೊಳ್ಳುವವರ ಬಾಯಿಗೆ ಆಹಾರ.. - ಟ್ರ್ಯಾಕ್ಟರ್
ಮಥುರಾ ಸಂಸದೀಯ ಕ್ಷೇತ್ರದ ಗೋವರ್ಧನ್‌ನಲ್ಲಿ ಭರ್ಜರಿ ಮತ ಬೇಟೆ ನಡೆಸಿರುವ 70ರ ಹರೆಯದ ಹೇಮಾ ಮಾಲಿನಿ, ಹೊಲದಲ್ಲಿ ಟ್ರ್ಯಾಕ್ಟರ್ ಏರಿ ತಾವೂ ಕೂಡ ರೈತ ಮಹಿಳೆ ಎಂದು ಕ್ಯಾಮರಾಗಳಿಗೆ ಪೋಸು ಕೊಟ್ಟರು.
ಮಥುರಾ ಸಂಸತ್ ಕ್ಷೇತ್ರ ವ್ಯಾಪ್ತಿಯ ಗೋವರ್ಧನ್‌ನಲ್ಲಿ ಭರ್ಜರಿ ಪ್ರಚಾರ ನಡೆಸಿದ ನಟಿ ಹೇಮಾ ಮಾಲಿನಿ, ಹೊಲದಲ್ಲಿ ಟ್ರ್ಯಾಕ್ಟರ್ ಏರಿ ತಾವೂ ರೈತ ಮಹಿಳೆ ಎಂಬುವಂತೆ ತೋರಿಸಿಕೊಂಡಿದ್ದಾರೆ. ಪರಿಸರವನ್ನ ಪ್ರೀತಿಸುವುದಾಗಿ ಹೇಳಿಕೊಂಡಿರುವ ಬಿಜೆಪಿ ಅಭ್ಯರ್ಥಿ ಹೇಮಾ, ತಮ್ಮಕ್ಷೇತ್ರದಲ್ಲಿ ಕೆಲಸ ಮಾಡಲು ಹೆಮ್ಮೆಯಾಗುತ್ತದೆ ಎಂದಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಹೇಮಾ ಮಾಲಿನಿ, ಆರ್ಎಲ್ಡಿಯ ಜಯಂತ್ ಚೌಧರಿ ವಿರುದ್ಧ 3 ಲಕ್ಷ ವೋಟ್ಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಇದರ ವಿರುದ್ಧ ವಿರೋಧ ಪಕ್ಷಗಳು ಹರಿಹಾಯ್ದಿದ್ದು, ಜಮ್ಮು-ಕಾಶ್ಮೀರ್ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ಬಿಸಿಲೇ ಕಾಣದ ಫ್ಯಾನ್ಸಿ ಟ್ರ್ಯಾಕ್ಟರ್‌ನಲ್ಲಿ ಹೇಮಾ ಮಾಲಿನಿ ಅಂತಾ ಕಾಲೆಳೆದಿದ್ದಾರೆ.