ಕರ್ನಾಟಕ

karnataka

ETV Bharat / bharat

ಮಕ್ಕಳದಿನಾಚರಣೆಯಂದು 'ಹೆಲ್ಮೆಟ್​' ಟ್ರೆಂಡ್​ ಆಗುತ್ತಿರುವುದು ಏಕೆ? - HelmetSaves trending news

ಹೆಲ್ಮೆಟ್​ ರಹಿತ ಪ್ರಯಾಣದಿಂದ ಸಾವಿರಾರು ಮಂದಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವು ಅಪಘಾತಗಳಲ್ಲಿ ಹೆಲ್ಮೆಟ್​ ಧರಿಸದೇ ಮಾಡಿದ ಪ್ರಯಾಣದಿಂದಾಗಿ ರೈಡರ್​ಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಇಲ್ಲೊಂದು ಮಕ್ಕಳ ತಂಡ ಮಕ್ಕಳ ದಿನಾಚರಣೆಯ ದಿನವಾದ ಇಂದು ತಮ್ಮ ಹಾಗೂ ತಮ್ಮವರ ಸುರಕ್ಷಗಾಗಿ ಹೆಲ್ಮೆಟ್​ ಧರಿಸಿ ಎಂಬ ಅಭಿಯಾನ ಆರಂಭಿಸಿದ್ದಾರೆ.

ಮಕ್ಕಳದಿನಾಚರಣೆಯಂದು 'ಹೆಲ್ಮೆಟ್​' ಟ್ರೆಂಡ್​

By

Published : Nov 14, 2019, 3:22 PM IST

ಹೈದರಾಬಾದ್​:ಮಕ್ಕಳ ದಿನಾಚರಣೆ ದಿನವಾದ ಇಂದು ಟ್ವಿಟರ್​ ಟಾಪ್​ ಟ್ರೆಂಡಿಂಗ್​​ನಲ್ಲಿ #HelmetSaves ಎಂಬ ಹ್ಯಾಶ್​ ಟ್ಯಾಗ್​ ಮುಂಚೂಣಿಯಲ್ಲಿದೆ.

ಹೆಲ್ಮೆಟ್​ ಧರಿಸದೆ ಪ್ರಯಾಣಿಸಿ ಸಾವಿರಾರು ಮಂದಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವು ಅಪಘಾತಗಳಲ್ಲಿ ಹೆಲ್ಮೆಟ್​ ಧರಿಸದೇ ಮಾಡಿದ ಪ್ರಯಾಣದಿಂದಾಗಿ ರೈಡರ್​ಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮಕ್ಕಳ ದಿನಾಚರಣೆಯ ದಿನವಾದ ಇಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ.

ಪುಟ್ಟ ಮಗುವೊಂದು, ಹೆಲ್ಮೆಟ್​ ಇಲ್ಲದೆ ಬೈಕ್​ ಏರಿ ಕೂತ ಅಪ್ಪನಿಗೆ ಮನೆಯೊಳಗಿದ್ದ ಹೆಲ್ಮೆಟ್​ ತಂದು ಕೊಟ್ಟು ರಸ್ತೆ ಸುರಕ್ಷತೆಯ ಬಗ್ಗೆ ಹೇಳಿಕೊಟ್ಟಿದ್ದಾಳೆ. ಈ ಮೂಲಕ ತಂದೆಯನ್ನು ಅಪಘಾತದ ಸಂಭವದಿಂದ ರಕ್ಷಿಸಿ ತನ್ನ ಕುಟುಂಬವನ್ನೂ ಪುಟ್ಟ ಮಗು ರಕ್ಷಿಸಿದೆ. ಈ ವಿಡಿಯೋ ಈಗ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ.

ಇನ್ನೊಂದೆಡೆ ಮಕ್ಕಳ ತಂಡವೊಂದು ಮಕ್ಕಳ ದಿನಾಚರಣೆಯ ದಿನವಾದ ಇಂದು ತಮ್ಮ ಹಾಗೂ ತಮ್ಮವರ ಭದ್ರತೆಗಾಗಿ ಹೆಲ್ಮೆಟ್​ ಧರಿಸಿ ಸುರಕ್ಷತೆಯಿಂದ ಪ್ರಯಾಣಿಸಿ ಎಂದು ತಮ್ ಪೋಷಕರಿಗೆ ತಿಳಿ ಹೇಳಿದೆ.

ತಾವು ಮಾತ್ರ ಹೆಲ್ಮೆಟ್​ ಧರಿಸಿಕೊಂಡು ತಮ್ಮ ಮಕ್ಕಳ ತಲೆಗೆ ಹೆಲ್ಮೆಟ್​ ಹಾಕದೆ ಶಾಲೆಗೆ ಕರೆತರುವ ಪೋಷಕರಿಗೆ ಈ ಮಕ್ಕಳು ತಿಳಿ ಹೇಳಿದ್ದಾರೆ. ಮಕ್ಕಳಿಗೂ ಹೆಲ್ಮೆಟ್​ ಹಾಕಿ. ಆ ಹೆಲ್ಮೆಟ್​ ನಿಮ್ಮ ಜೊತೆಗೆ ನಿಮ್ಮವರನ್ನೂ ರಕ್ಷಿಸುತ್ತದೆ ಎಂದು ಮಕ್ಕಳು ಹೇಳಿದ್ದಾರೆ.

ಇಂದು ನವೆಂಬರ್​ 14 ಮಕ್ಕಳ ದಿನಾಚರನಣೆ. ಮಕ್ಕಳ ದಿನವಾದ ಇಂದೇ ಈ ಹೆಲ್ಮೆಟ್ ಸೇಫ್​​ ಟ್ರೆಂಡ್​ ಆಗುತ್ತಿದೆ. ಮಕ್ಕಳ ದಿನಾಚರಣೆಯಲ್ಲಿ ಮಕ್ಕಳೇ ಫುಲ್​ ಹವಾ ಕ್ರಿಯೇಟ್​ ಮಾಡಿದ್ದಾರೆ. ತಮ್ಮ ರಕ್ಷಣೆಗಾಗಿ ಮಕ್ಕಳೇ ಹಿರಿಯರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ವಿಡಿಯೋ ಕೂಡಾ ಈಗ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ.

ABOUT THE AUTHOR

...view details