ಹೈದರಾಬಾದ್ :ಭಾರೀ ಮಳೆಯಿಂದಾಗಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಹೈದರಾಬಾದ್ ನಗರದಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತೆಲಂಗಾಣದ ಹಲವು ಜಿಲ್ಲೆಗಳಲ್ಲೂ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ.
ಹೈದರಾಬಾದ್ನಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆ: ಎಚ್ಚರಿಕೆಯಿಂದ ಇರಲು ಸೂಚನೆ - ತೆಲಂಗಾಣದಲ್ಲಿ ಮಳೆ
ಹೈದರಾಬಾದ್ ನಗರ ಸೇರಿಂದತೆ ತೆಲಂಗಾಣ, ಆಂಧ್ರ ಪ್ರದೇಶ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದ ಇರಲು ಜನರಿಗೆ ಸೂಚಿಸಲಾಗಿದೆ.
ಹೈದರಾಬಾದ್ನಲ್ಲಿ ಪ್ರವಾಹ
ಈಗಾಗಲೇ ಹೈದರಾಬಾದ್ ನಗರದ ತಗ್ಗು ಪ್ರದೇಶದ ಕಾಲೊನಿಗಳ ನಿವಾಸಿಗಳನ್ನು ಮಹಾನಗರ ಪಾಲಿಕೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು, ಇತರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸಚಿವ ಕೆ.ಟಿ ರಾಮರಾವ್ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರವಾಹ ಸಂದರ್ಭ ಎದುರಿಸಲು ಸಿದ್ದರಾಗಿರುವಂತೆ ಸೂಚಿಸಿದ್ದಾರೆ.