ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಭಾರೀ ಹಿಮ ಹಾಗೂ ಮಳೆಯ ಕಾರಣದಿಂದ ಉಂಟಾದ ಹಿಮಪಾತ ಹಾಗೂ ಭೂಕುಸಿತದಿಂದಾಗಿ ಸುಮಾರು 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮಹಿಳೆಯರೂ, ಮಕ್ಕಳು ಸೇರಿದ್ದು 12ಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಅಲ್ಲಿನ ಜನತೆ ತತ್ತರಿಸಿದ್ದಾರೆ. ಅಕ್ಷರರಶಃ ಮನೆಗಳಿಂದ ಹೊರಗೆ ಬರಲು ಕೂಡಾ ಭಯಪಡುತ್ತಿದ್ದಾರೆ. ಭಾರೀ ಶಿತಗಾಳಿಯ ಕಾರಣದಿಂದ ರಸ್ತೆ ಸಂಚಾರ ಹಾಗು ವಾಯು ಸಂಚಾರಕ್ಕೂ ಕೂಡಾ ತೊಂದರೆಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 11 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಸೋಮವಾರವಷ್ಟೇ ಬಲೂಚಿಸ್ತಾನದಲ್ಲಿ 14 ಮಂದಿ ಸಾವನ್ನಪ್ಪಿದ್ದು ವರದಿಯಾಗಿತ್ತು.
ಪಾಕ್ನಲ್ಲಿ ವರುಣನ ನರ್ತನದೊಂದಿಗೆ ಹಿಮದ ಅಬ್ಬರ: 35ಕ್ಕೂ ಹೆಚ್ಚು ಮಂದಿ ಬಲಿ - ಹಿಮಪಾತದಿಂದಾಗಿ ಪಾಕ್ನಲ್ಲಿ ಅವಾಂತರ ಸೃಷ್ಟಿ
ಉತ್ತರ ಕಾಶ್ಮೀರದಲ್ಲೂ ಮಾತ್ರವಲ್ಲದೇ ಪಾಕಿಸ್ತಾನದಲ್ಲೂ ಕೂಡಾ ಹಿಮಪಾತ ಹಾಗೂ ಭೂಕುಸಿತ ಭಾರೀ ಅವಾಂತರವನನ್ನು ಸೃಷ್ಟಿಸಿದೆ. ಭಾರಿ ಹಿಮ ಹಾಗೂ ಮಳೆ ಸುರಿಯುತ್ತಿರುವುದರಿಂದ ಸಂಭವಿಸಿದ ದುರಂತಗಳಲ್ಲಿ 35ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಇನ್ನೊಂದು ಆಯಾಮದಲ್ಲಿಯೂ ಕೂಡಾ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಮಳೆ ಹಾಗೂ ರಸ್ತೆಗಳು ಸರಿಯಾಗಿ ಕಾಣದ ಕಾರಣದಿಂದ ರಸ್ತೆ ಅಪಘಾತಗಳಲ್ಲೂ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. '' ಭಾರೀ ಮಳೆಯಿಂದಾಗಿ ಹಲವಾರು ರಸ್ತೆಗಳನ್ನು ಮುಚ್ಚಲಾಗಿದ್ದು ಈಗಾಗಲೇ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ'' ಎಂದು ಪಾಕಿಸ್ತಾನದ ಪ್ರಕೃತಿ ವಿಕೋಪ ಪರಿಹಾರ ಹಾಗೂ ನಾಗರೀಕ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಸೈಯದ್ ಶಹೀದ್ ಮೊಹಿದ್ದೀನ್ ಖಾದ್ರಿ ಸ್ಪಷ್ಟಪಡಿಸಿದ್ದಾರೆ. ಹಿಮಪಾತದಿಂದಾಗಿ ಝೀಯಾರಾಟ್ ಹಾಗೂ ಖ್ವೆಟ್ಟಾ ನಡುವಿನ ಸಂಪರ್ಕ ಕೊಂಡಿಯಾದ ಕೋಜಾಕ್ ಟಾಪ್ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಿನ ಸಂಚಾರ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.
ಅತಿವೃಷ್ಟಿಯ ಕಾರಣದಿಂದ ತಳಮಟ್ಟದಲ್ಲಿರುವ ಪ್ರದೇಶಗಳಾದ ಸಿಯಾಲ್ಕೋಟ್, ಗುಜರಾತ್ ಹಾಗೂ ಪಂಜಾಬ್ ಪ್ರಾಂತ್ಯದ ಹಲವಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ವರದಿಯಾಗಿದೆ