ಕರ್ನಾಟಕ

karnataka

By

Published : Nov 28, 2019, 6:29 AM IST

Updated : Nov 28, 2019, 7:23 AM IST

ETV Bharat / bharat

ಕೂಲ್​.. ಕೂಲ್​ ನಗರಿಯಲ್ಲಿ ಭಾರೀ ಹಿಮಮಳೆ... ಹಿಮದಲ್ಲಿ ಸಿಲುಕಿಕೊಂಡ ಪದವೀಧರರು ಸೇರಿ 12 ಜನ!

ಕೂಲ್​.. ಕೂಲ್​.. ನಗರಿ ಹಿಮಾಚಲಪ್ರದೇಶದಲ್ಲಿ ಭಾರೀ ಹಿಮ ಮಳೆಯಾಗುತ್ತಿದ್ದು, ಪದವೀಧರರು ಸೇರಿ 12ಜನರ ಗುಂಪು ಸಿಲುಕಿಕೊಂಡಿದೆ.

ಭಾರಿ ಹಿಮಪಾತ
ಭಾರಿ ಹಿಮಪಾತ

ಹಿಮಾಚಲ ಪ್ರದೇಶ : ಭಾರೀ ಹಿಮಪಾತದಿಂದಾಗಿ 12 ಜನರ ಗುಂಪು ಸಿಲುಕಿಕೊಂಡಿರು ಘಟನೆ ಇಲ್ಲಿನ ಲಹೌಲ್​- ಸ್ಪಿತಿ ಜಿಲ್ಲೆಯ ಸಿಸ್ಸು ಪ್ರದೇಶದಲ್ಲಿ ನಡೆದಿದೆ.

ವಿಶ್ವಬ್ಯಾಂಕ್ ಅನುದಾನಿತ ಸರ್ಕಾರಿ ಯೋಜನೆ ಅಭ್ಯಾಸಕ್ಕೆಂದು 10 ಪದವೀದರರು ಸಿಸ್ಸು ಪ್ರದೇಶಕ್ಕೆ ತೆರಳಿದ್ದರು. ಆ ಪ್ರದೇಶದಲ್ಲಿ ಭಾರೀ ಹಿಮ ಸುರಿಯುತ್ತಿದ್ದು, ಪದವೀಧರರು ಸೇರಿ 12 ಜನ ಸಿಲುಕಿಕೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಹಲಾವಾರು ದಿನಗಳಿಂದ ಭಾರಿ ಹಿಮ ಬೀಳುತ್ತಿದೆ. ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಹಿಮಮಳೆಯಿಂದಾಗಿ ಪ್ರಾಣಿಗಳಿಗೆ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ರಸ್ತೆಗಳು ಹಿಮದಿಂದ ಸಂಪೂರ್ಣ ಮುಚ್ಚಿ ಹೋಗಿದ್ದು, ಸವಾರರು ಪರದಾಡುವಂತಾಗಿದೆ. ಇನ್ನು ಜನರು ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.

.

Last Updated : Nov 28, 2019, 7:23 AM IST

ABOUT THE AUTHOR

...view details