ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ದಟ್ಟವಾದ ಮಂಜು ಆವರಿಸಿದ್ದು, ತಾಪಮಾನವು ಕನಿಷ್ಠ 6 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿದೆ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ಆ್ಯಂಡ್ ವೆದರ್ ಫೋರ್ಕಾಸ್ಟಿಂಗ್ & ರಿಸರ್ಚ್ (ಸಫಾರ್) ತಿಳಿಸಿದೆ.
ಇಂದು ಬೆಳಗ್ಗೆ ಉತ್ತರಾ ಖಂಡ, ಪೂರ್ವ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಚಂಡೀಗಡ, ದೆಹಲಿಯಲ್ಲಿ ಭಾರಿ ಮಂಜು ಕಂಡು ಬಂದಿದ್ದು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಗೋಚರವಾಗಿದೆ.
ವಾತಾವರಣದ ಗುಣಮಟ್ಟ:ದೆಹಲಿ ವಾತಾವರಣದ ಗುಣಮಟ್ಟವು ಕಳಪೆ ಪ್ರಮಾಣದಲ್ಲಿ ದಾಖಲಾಗಿದ್ದು, ಬೆಳಗ್ಗೆ 5.30ರ ಸುಮಾರಿಗೆ ಅಮೃತಸರ, ಪಟಿಯಾಲ ಮತ್ತು ಅಂಬಾಲಾದಲ್ಲಿ (25 ಮೀ) ಬರೇಲಿ & ದಿಬ್ರುಘರ್ (200 ಮೀ), ಕೊಮಿಲ್ಲಾ (400 ಮೀ) ಪಾಲಂ ದೆಹಲಿ, ಸಫ್ದರ್ಜಂಗ್ ದೆಹಲಿ, ಲಕ್ನೋ, ಭಾಗಲ್ಪುರ್, ಪೂರ್ಣಿಯಾ, ತೇಜ್ಪುರ್, ಕೈಲಾಸಹರ್ (500 ಮೀ) ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಪಂಜಾಬ್ನಲ್ಲೂ ದಟ್ಟವಾದ ಮಂಜು ಆವರಿಸಿದ್ದು, ನಗರವೇ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.