ಕರ್ನಾಟಕ

karnataka

By

Published : Aug 1, 2019, 4:30 PM IST

ETV Bharat / bharat

ಗುಜರಾತ್​ನ ವಿವಿಧೆಡೆ ಭಾರಿ ಮಳೆ... ರೈಲು, ವಿಮಾನ ಸಂಚಾರ ಬಂದ್​​​​!

ಬುಧವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ಕೆಲವು ಕಡೆಯಲ್ಲಿ ಎನ್​ಡಿಆರ್​​ಎಫ್​​ ರಕ್ಷಣಾ ಕಾರ್ಯಕ್ಕಿಳಿದು ಹಲವರನ್ನು ಆಪತ್ತಿನಿಂದ ಪಾರು ಮಾಡಿತ್ತು. ಭಾರಿ ವರ್ಷಧಾರೆಯಿಂದಾಗಿ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಭಾರಿ ಮಳೆ

ಗುಜರಾತ್​:ಇಲ್ಲಿನ ವಡೋದರಾ, ಭರೂಚ್​​ ದಕ್ಷಿಣದ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರೈಲು ಸಂಚಾರ ಹಾಗೂ ವಿಮಾನ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಬುಧವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ಕೆಲವು ಕಡೆಯಲ್ಲಿ ಎನ್​ಡಿಆರ್​​ಎಫ್​​ ರಕ್ಷಣಾ ಕಾರ್ಯಕ್ಕಿಳಿದು ಹಲವರನ್ನು ಆಪತ್ತಿನಿಂದ ಪಾರು ಮಾಡಿತ್ತು. ಭಾರಿ ವರ್ಷಧಾರೆಯಿಂದ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆವೆ.

ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೆ ಸುರಿದ ಮಳೆಯ ಪರಿಣಾಮ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರತಿಕೂಲ ಹವಾಮಾನದಿಂದ ವಿಮಾನಗಳು ಸಹ ಹಾರಾಟ ನಡೆಸಿಲ್ಲ.

ಮಳೆಯಿಂದಾದ ಅವಾಂತರವನ್ನು ನಿಭಾಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದು, ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಗುಜರಾತ್​ನ ವಿವಿಧೆಡೆಗಳಲ್ಲಿ ಶನಿವಾರದ ತನಕ ಮಳೆ ಮುಂದುವರೆಯುವ ಸಾಧ್ಯತೆ ಇದೆ.

ABOUT THE AUTHOR

...view details