ಕರ್ನಾಟಕ

karnataka

ETV Bharat / bharat

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಆಂಧ್ರ, ತೆಲಂಗಾಣದಲ್ಲಿ ಭಾರಿ ಮಳೆ - ಆಂಧ್ರದ ಕಾಕಿನಾಡ ಪ್ರದೇಶ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ, ತೆಲಂಗಾಣದಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳವರೆಗೆ ಮಳೆ ಹೀಗೆಯೇ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.

Heavy rains in Andhra
ಆಂಧ್ರ, ತೆಲಂಗಾಣದಲ್ಲಿ ಭಾರಿ ಮಳೆ

By

Published : Oct 13, 2020, 3:01 PM IST

Updated : Oct 13, 2020, 3:28 PM IST

ಕಾಕಿನಾಡ (ಆಂಧ್ರ ಪ್ರದೇಶ): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ, ತೆಲಂಗಾಣದ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಇಂದು ಬೆಳಗ್ಗೆ 6.30 ರಿಂದ 7.30 ರ ಸುಮಾರಿಗೆ ಚಂಡಮಾರುತವು ಕಾಕಿನಾಡ ಕರಾವಳಿಯನ್ನು ದಾಟಿದೆ. ಗಂಟೆಗೆ 55 ರಿಂದ 65 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಶ್ರೀಕಾಕುಳಂ, ವಿಜಯನಗರಂ, ವಿಶಾಖ ಪಟ್ಟಣಂ, ಕೃಷ್ಣ ಜಿಲ್ಲೆಗಳಲ್ಲಿ 11.5 ಸೆಂಟಿ ಮೀಟರ್​ನಿಂದ 24 ಸೆಂಟಿ ಮೀಟರ್​ವರೆಗೆ ಮಳೆಯಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರದಲ್ಲಿ ಭಾರಿ ಮಳೆ

ಮಚಿಲಿಪಟ್ನಂ, ವಿಶಾಖಪಟ್ಟಣಂ ಮತ್ತು ಗೋಪಾಲ್ಪುರದ ಕರಾವಳಿ ಭಾಗಗಳ ಮೇಲೆ ಡಾಪ್ಲರ್​​ ಹವಾಮಾನ ರಾಡಾರ್​ಗಳು ನಿಗಾ ವಹಿಸಿವೆ. ತೆಲಂಗಾಣದ ಬಹು ಭಾಗಗಳಲ್ಲಿ ಚಂಡಮಾರುತದ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಕರ್ನಾಟಕ, ದಕ್ಷಿಣ ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶ, ದಕ್ಷಿಣ ಒಡಿಶಾಗಳಲ್ಲೂ ವರ್ಷಧಾರೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ಭಾರಿ ಮಳೆಯಾಗುವುದರಿಂದ ಕರಾವಳಿ ಭಾಗದ ಜನರು ಸಮುದ್ರಕ್ಕಿಳಿಯದಂತೆ ಐಎಂಡಿ ಸೂಚನೆ ನೀಡಿದೆ.

Last Updated : Oct 13, 2020, 3:28 PM IST

ABOUT THE AUTHOR

...view details