ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣ ಅಬ್ಬರ ಮುಂದುವರಿದಿದೆ. ತಡ ರಾತ್ರಿಯೂ ಸಹ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು, ಜನ ತತ್ತರಿಸಿದ್ದಾರೆ.
ರಾಷ್ಟ್ರರಾಜಧಾನಿಯಲ್ಲಿ ವರುಣನ ಅಬ್ಬರ... ಪ್ರಕೃತಿಯ ಮುನಿಸಿಗೆ ತತ್ತರಿಸಿದ ದೆಹಲಿ ಜನ! - ದೆಹಲಿ ಮಳೆ
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗುಡುಗು ಸಹಿತ ಮಳೆಗೆ ಜನ ತತ್ತರಿಸಿದ್ದಾರೆ. ರಾತ್ರಿ 2 ಗಂಟೆಯವರೆಗೆ ಗಾಳಿ-ಸಹಿತ ಭಾರೀ ಮಳೆ ಸುರಿದಿದೆ.

ಹೌದು, ಗಂಟೆಗೆ 40-70 ಕಿ.ಮೀ ವೇಗದಲ್ಲಿ ಗಾಳಿ ಜೊತೆ ಮಳೆಯು ಸುರಿದಿದೆ. ರಾಜ್ಪಥ್ ನಗರದಲ್ಲಿ ರಾತ್ರಿ 2 ಗಂಟೆಯವರೆಗೆ ವಿಪರೀತ ಮಳೆ ಸುರಿದಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ಗಂಟೆಗೆ 40ರಿಂದ 70 ಕಿ.ಮೀ ವೇಗದಲ್ಲಿ ಭಾರೀ ಗಾಳಿ ಬೀಸುತ್ತಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ರಾತ್ರಿಯಿಂದ ನವದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರವಾಹದ ಆತಂಕ ಎದುರಾಗಿದೆ. ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೊನ್ನೆ ಸುರಿದ ಮಳೆಯಲ್ಲಿ ಮೂವರು ಕೊಚ್ಚಿಹೋಗಿದ್ದಾರೆ. ಶುಕ್ರವಾಋ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಸುರಿದ ಮಳೆಯಿಂದ ಮನೆಗಳೇ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ, ದೆಹಲಿಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.