ಮಾಲೂರು/ ಬೆಂಗಳೂರು:ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕೊಯಮತ್ತೂರಿನಲ್ಲಿ ಮನೆಯ ಗೋಡೆಗಳು ಕುಸಿದು 16ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ, ಇದೆ ತಮಿಳನಾಡಿನ ಮಾಲೂರು-ಬೇರಿಕೆ ರಸ್ತೆಯಲ್ಲಿ ನೀರಿಗೆ ತತ್ವಾರ ಉಂಟಾಗಿ ಖಾಲಿ ಕೊಡಗಳನ್ನಿಟ್ಟು ಜನರು ಧರಣಿ ಕುಳಿತಿದ್ದಾರೆ.
ತಮಿಳನಾಡಿನಲ್ಲಿ ಒಂದೆಡೆ ಪ್ರವಾಹ ಭೀತಿ: ಮತ್ತೊಂದೆಡೆ ನೀರಿಗಾಗಿ ಹಾಹಾಕಾರ - Tamilnadu news
ತಮಿಳನಾಡಿನಲ್ಲಿ ಒಂದೆಡೆ ವಿಪರೀತ ಮಳೆಗೆ ಜನ ಜರ್ಝರಿತರಾದರೆ ಮತ್ತೊಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಖಾಲಿ ಕೊಡಗಳನ್ನು ರಸ್ತೆಯಲ್ಲಿಟ್ಟು ಮಾಲೂರು-ಬೇರಿಕೆ ರಸ್ತೆಯಲ್ಲಿ ಜನ ಧರಣಿ ಕುಳಿತಿದ್ದಾರೆ.
ತಮಿಳನಾಡಿನಲ್ಲಿ ಒಂದೆಡೆ ಪ್ರವಾಹ ಭೀತಿ: ಮತ್ತೊಂದೆಡೆ ನೀರಿಗಾಗಿ ಹಾಹಾಕಾರ
ಮೊನ್ನೆಯೇ ಭಾರತದ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತಮಿಳುನಾಡು ಒಳನಾಡಿನಲ್ಲಿ ಬಾರಿ ಮಳೆ ಮುನ್ನೆಚ್ಚರಿಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಸುರಿದ ಮಳೆ ಮಾರುತಕ್ಕೆ ಮೂರು ಮನೆ ಕುಸಿದು 16 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಮಳೆಯಿಂದಾಗಿ ತಮಿಳನಾಡಿನ ಎಂಟು ಜಿಲ್ಲೆಗಳಿಗೆ ಸರ್ಕಾರ ರಜಾ ಘೋಷಿಸಿದೆ. ಕೊಯಮತ್ತೂರು ಸುತ್ತ ಅರಬ್ಬಿ ಸಮುದ್ರದ ಚಂಡಮಾರುತಕ್ಕೆ ಎರಡು ದಿನಗಳಿಂದ ಜನ ತತ್ತರಿಸಿದ್ದಾರೆ.
ಈ ನಡುವೆ ಮಾಲೂರು - ಬೇರಿಕೆ ರಸ್ತೆ ಬದಿ ಜನರು ಖಾಲಿ ಕೊಡಗಳನ್ನು ರಸ್ತೆಯಲ್ಲಿಟ್ಟು ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.