ರಜೌರಿ (ಜಮ್ಮು ಮತ್ತು ಕಾಶ್ಮೀರ): ಜಮ್ಮು & ಕಾಶ್ಮೀರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇಲ್ಲಿನ ರಜೌರಿ ಪ್ರದೇಶದಲ್ಲಿ ಯಾರೂ ನೀರು ಹರಿಯುವ ಪ್ರದೇಶಗಳತ್ತ ತೆರಳದಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಜೌರಿ ಪೊಲೀಸರು, ‘ಕಳೆದ 12 ಗಂಟೆಗಳಿಂದ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಬಹುತೇಕ ಎಲ್ಲ ನೀರಿನ ಮೂಲಗಳು ತುಂಬಿ ಹರಿಯುತ್ತಿವೆ. ಈ ಕಾರಣದಿಂದಾಗಿ ಜನರು ನೀರು ಹರಿಯುವಂತಹ ಸ್ಥಳಗಳ ಬಳಿ ತೆರಳಬಾರದು, ಒಂದು ವೇಳೆ ಯಾವುದಾದರೂ ತುರ್ತು ಸಂದರ್ಭವಿದ್ದರೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ’ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.