ಮುಂಬೈ: ವಾಣಿಜ್ಯ ನಗರಿಯಲ್ಲಿ ಮಳೆ ಮತ್ತೊಮ್ಮೆ ಮುಂಬೈ ನಾಗರೀಕರ ತೊಂದರೆ ತಂದೊಡ್ಡಿದೆ. ಮಂಗಳವಾರ ಮುಂಜಾನೆಯಿಂದ ತಡರಾತ್ರಿವರೆಗೆ ಮಾಯನಗರಿಯಲ್ಲಿ ಭಾರಿ ಮಳೆಯಾಗಿದ್ದು, ನಗರದ ಪ್ರಮುಖ ಪ್ರದೇಶಗಳಲ್ಲಿ ನೀರು ಪ್ರವಾಹದಂತೆ ಹರಿಯುತ್ತಿದೆ.
ವ್ಯಾಪಕ ಮಳೆಯಿಂದಾಗಿ ಹಳಿಗಳ ಮೇಲೆ ನೀರು ತುಂಬಿದ್ದರಿಂದ ಮುಂಬೈನ ಸಿಯಾನ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಸಿಲುಕಿಕೊಂಡಿದ್ದರು. ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಉಪನಗರ ಮುಂಬೈನಲ್ಲಿ ಮಂಗಳವಾರ ಒಂದೇ ದಿನ 23.4 ಮಿ.ಮೀ. ಮಳೆಯಾಗಿದೆ. ಇದು ಸಾಮಾನ್ಯ ಮಳೆಗಿಂತ ಶೇ 129ರಷ್ಟು ಸುರಿದಿದೆ.