ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಡರಾತ್ರಿ ಭಾರಿ ಮಳೆ ಸುರಿದಿದ್ದು, ಮಳೆ ನೀರಿನಲ್ಲೇ ವಾಹನಗಳು ಸಂಚರಿಸುವ ದೃಶ್ಯಗಳು ಕಂಡು ಬಂದವು.
ದೆಹಲಿಯಲ್ಲಿ ಗುಡುಗು, ಮಿಂಚಿನೊಂದಿಗೆ ಅಬ್ಬರಿಸಿದ ವರುಣ: ಮಳೆ ನೀರಿನಿಂದ ಆವೃತವಾದ ರಾಜಪಥ
ಭಾನುವಾರದ ನಸುಕಿನಲ್ಲಿ ಭಾರೀ ಮಳೆಯು ಗುಡುಗು, ಮಿಂಚಿನೊಂದಿಗೆ ಅಬ್ಬರಿಸಿತು. 'ಗಂಟೆಗೆ 20-50 ಕೆಎಂಪಿಹೆಚ್ ವೇಗದ ಗಾಳಿ ಮಳೆಯು ಗುಡುಗು ಸಹಿತ ದೆಹಲಿ ಹಾಗೂ ನೆರೆ ಹೊರೆಯ ಪ್ರದೇಶಗಳಲ್ಲಿ ಮುಂದುವರಿಯುವ ಸಾಧ್ಯತೆಯಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.

20-50 ಕೆಎಂಪಿಹೆಚ್ ವೇಗದ ಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಮಳೆ ಸಂಭವಿಸುತ್ತದೆ. ಇಡೀ ದೆಹಲಿ, ಹನ್ಸಿ, ನರ್ವಾನಾ, ಕೈತಾಲ್, ಹಿಸ್ಸಾರ್, ಜಿಂದ್, ರೋಹ್ಟಕ್, ಗೋಹಾನಾ, ಗನ್ನೌರ್, ಸೋನಿಪತ್, ಬಾರೌಟ್, ಪಾಣಿಪತ್, ಕರ್ನಾಲ್, ಶಾಮ್ಲಿ, ಮುಜಫರ್ನಗರ, ಬಿಜ್ನೋರ್, ಝಜ್ಜರ್, ಭಿವಾನಿ, ಮಹೇಂದರ್‌ಗಢ, ಕೊಸ್ಲಿ, ಗುರುಗ್ರಾಮ್, ಮನೇಸರ್, ರೇವಾರಿ, ಭೀವಾರಿ, ನಾರ್ನಾಲ್, ಮೀರತ್, ಹಾಪುರ್, ನುಹ್, ಪಾಲ್ವಾಲ್, ನೋಯ್ಡಾ ಸೇರಿದಂತೆ ಇತರೆ ಕಡೆ ಸುರಿಯುತ್ತಿದೆ ಎಂದು ಹೇಳಿದೆ.