ಕರ್ನಾಟಕ

karnataka

ETV Bharat / bharat

ಮಹಾಮಳೆಗೆ 'ಮಹಾ'ನಗರ ತತ್ತರ... ವಿಮಾನ ಹಾರಾಟ ವ್ಯತ್ಯಯ, ಜನಜೀವನ ಅಸ್ತವ್ಯಸ್ತ - ಮಹಾರಾಷ್ಟ್ರ ಮಳೆ

ಮುಂಬೈ ಅಂತಾರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರದ ಮಾಹಿತಿ ಪ್ರಕಾರ ಗುರುವಾರ 30 ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, 280 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಮಳೆ

By

Published : Sep 5, 2019, 12:15 PM IST

ಮುಂಬೈ:ಮಹಾರಾಷ್ಟ್ರದ ವಿವಿಧೆಡೆ ಭಾರಿ ಮಳೆಯಾಗುತ್ತಿರುವ ಪರಿಣಾಮ ಜನ-ಜೀವನ ಅಸ್ತವ್ಯಸ್ತವಾಗಿದೆ. ಪ್ರತಿಕೂಲ ಹವಾಮಾನದ ಪರಿಣಾಮ ಮೂವತ್ತಕ್ಕೂ ಅಧಿಕ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮುಂಬೈ ಅಂತಾರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರದ ಮಾಹಿತಿ ಪ್ರಕಾರ ಗುರುವಾರ 30 ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, 280 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಮುಂಬೈ, ಠಾಣೆ, ಪಾಲ್ಗಾರ್ ಹಾಗೂ ರಾಯಗಢ ಪ್ರದೇಶಗಳಲ್ಲಿ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರದ ಬಹುತೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದೂ ರಜೆಯನ್ನು ಮುಂದುವರೆಸಲಾಗಿದೆ.

ಬಿಟೌನ್ ಚಟುವಟಿಕೆ ಸ್ತಬ್ದ:

ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹಿಂದಿ ಚಿತ್ರರಂಗದ ಚಟುವಟಿಕೆಗಳು ಸಹ ಸ್ತಬ್ದವಾಗಿದೆ. ಸ್ಟಾರ್ ನಟ ಸಲ್ಮಾನ್ ಖಾನ್, ಕತ್ರೀನಾ ಕೈಫ್, ಸನ್ನಿ ಡಿಯೋಲ್ ತಮ್ಮ ಚಟುವಟಿಕೆಗಳಿಗೆ ಕೊಂಚ ಬ್ರೇಕ್ ನೀಡಿದ್ದಾರೆ. 'ಸೆಕ್ಷನ್ 375' ಸಿನಿಮಾದ ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ.

ABOUT THE AUTHOR

...view details