ಕರ್ನಾಟಕ

karnataka

ETV Bharat / bharat

ಮಗುವಿನ ಜೀವ ಉಳಿಸಲು ಪ್ಲಾಸ್ಟಿಕ್​ ಟಬ್​​ನಲ್ಲಿಟ್ಟು, ತಲೆ ಮೇಲೆ ಹೊತ್ತು ನೀರಿಗಿಳಿದ ಪೊಲೀಸ್​! - ಮಗುವಿನ ಜೀವ ಉಳಿಸಲು ಪ್ಲಾಸ್ಟಿಕ್​ ಟಬ್

ಕಳೆದ ಕೆಲ ದಿನಗಳಿಂದ ಗುಜರಾತ್​ನ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ವರುಣ ಅಬ್ಬರಿಸುತ್ತಿದ್ದು, ಇದರ ಮಧ್ಯೆ ಮಗುವಿನ ಜೀವ ಉಳಿಸಲು ಪ್ಲಾಸ್ಟಿಕ್​ ಟಬ್​​ನಲ್ಲಿಟ್ಟು, ತಲೆ ಮೇಲೆ ಹೊತ್ತು ಪಿಎಸ್​​ಐವೋರ್ವ ನೀರಿಗಳಿದಿರುವ ಘಟನೆ ನಡೆದಿದೆ.

ವಡೋದರದಲ್ಲಿ ಮಳೆ

By

Published : Aug 2, 2019, 7:08 PM IST

Updated : Aug 2, 2019, 11:27 PM IST

ವಡೋದರಾ: ಕಳೆದ ಕೆಲ ದಿನಗಳಿಂದ ಗುಜರಾತ್​​ನ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರ ಮಧ್ಯೆ ಕೆಲವು ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಅನೇಕರು ಮನೆ ಕಳೆದುಕೊಂಡಿದ್ದಾರೆ.

ವಡೋದರದಲ್ಲಿ ಮಳೆ

ಸಾರ್ವಜನಿಕರ ರಕ್ಷಣೆಗೆ ಎನ್​ಡಿಆರ್​ಎಫ್​ ಹಾಗೂ ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಜಲಚರಗಳು ಪ್ರವಾಹದಲ್ಲಿ ತೇಲಿಕೊಂಡು ಬರುತ್ತಿವೆ. ರಸ್ತೆ ತುಂಬಾ ಮಳೆನೀರು ಹರಿಯುತ್ತಿದ್ದು ಮೊಣಕಾಲಿನವರೆಗೂ ನೀರು ತುಂಬಿ ನಿಂತಿದೆ. ಕಳೆದ 24 ಗಂಟೆಗಳಲ್ಲಿ 442 ಮಿ.ಮೀ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದರ ಮಧ್ಯೆ ಪಿಎಸ್​​ಐ ಗೋವಿಂದ್​ ಚವ್ಹಾಣ ಎರಡು ವರ್ಷದ ಮಗುವನ್ನು ಪ್ಲಾಸ್ಟಿಕ್​ ಟಬ್​​ನಲ್ಲಿಟ್ಟು ತಲೆ ಮೇಲೆ ಹೊತ್ತು ನೀರಿಗಿಳಿದು ಜೀವ ರಕ್ಷಣೆ ಮಾಡಿದ್ದಾರೆ.

ವಡೋದರದಲ್ಲಿ ಮಳೆ

ಪ್ರತಿದಿನ ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ, ವಿಶ್ವಮಿತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿರುವ ಕಾರಣ, ಜನಜೀವನ ಅಸ್ತವ್ಯಸ್ತವಾಗಿದೆ.

Last Updated : Aug 2, 2019, 11:27 PM IST

ABOUT THE AUTHOR

...view details