ಮುಂಬೈ :ನಗರದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವೆಡೆ ಗುಡ್ಡ ಕುಸಿತ ಸಂಭವಿಸಿದೆ.
ಮುಂಬೈನಲ್ಲಿ ಮುಂದುವರಿದ ವರುಣನ ಅಬ್ಬರ: ರಸ್ತೆ ಬದಿ ಗುಡ್ಡ ಕುಸಿತ - ಮುಂಬೈನಲ್ಲಿ ಮಳೆ
ಮುಂಬೈ ಮಹಾನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಹಲವು ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆ ಬದಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಉಂಟಾಗಿದೆ.
![ಮುಂಬೈನಲ್ಲಿ ಮುಂದುವರಿದ ವರುಣನ ಅಬ್ಬರ: ರಸ್ತೆ ಬದಿ ಗುಡ್ಡ ಕುಸಿತ Heavy Rain in Mumbai](https://etvbharatimages.akamaized.net/etvbharat/prod-images/768-512-8312973-131-8312973-1596688818244.jpg)
ಮುಂಬೈನಲ್ಲಿ ಭಾರೀ ಮಳೆ
ಭಾರೀ ಮಳೆಯಿಂದ ಮಂತ್ರಾಲಯ, ಪೆಡ್ಡರ್ ರಸ್ತೆ ಮತ್ತು ಬಾಬುಲ್ನಾಥ್ ಪ್ರದೇಶಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಜೀವನ ಆಸ್ತವ್ಯಸ್ತವಾಗಿದೆ. ಬಾಬುಲ್ನಾಥ್ ಜಂಕ್ಷನ್ ಬಳಿಯ ಎನ್. ಎಸ್ ಪಾಟ್ಕರ್ ರಸ್ತೆಯ ಕ್ಯಾಮ್ಸ್ ಕಾರ್ನರ್ ಪ್ರದೇಶದಲ್ಲಿ ರಸ್ತೆ ಬದಿ ಗುಡ್ಡ ಕುಸಿತ ಸಂಭವಿಸಿದೆ. ಅಲ್ಲದೇ, ಕಂಡಿವಲಿಯ ಟೈಮ್ಸ್ ಆಫ್ ಇಂಡಿಯಾ ಬಳಿಯೂ ಭಾಗಶಃ ಗುಡ್ಡ ಕುಸಿತ ಸಂಭವಿಸಿದೆ.
ಬಾಬುಲ್ನಾಥ್ ಜಂಕ್ಷನ್ ಹೆಚ್ಚಾಗಿ ವಿಐಪಿಗಳ ಮನೆಗಳಿರುವ ಪ್ರದೇಶವಾಗಿದೆ. ಘಟನೆ ನಡೆಯುತ್ತಿದ್ದಂತೆ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.