ಮುಂಬೈ: ವಾಣಿಜ್ಯ ನಗರಿಯಲ್ಲಿ ಕೊರೊನಾ ಅಟ್ಟಹಾಸದ ನಡುವೆಯೇ ಮಳೆಯ ಆರ್ಭಟ ಶುರುವಾಗಿದೆ.
ಮುಂಬೈನಲ್ಲಿ ಕೊರೊನಾ ಅಟ್ಟಹಾಸದ ಮಧ್ಯೆ ಮಳೆಯ ಆರ್ಭಟ - Mumbai Covid
ಮುಂಬೈ ನಗರದಲ್ಲಿ ಬೆಳಗ್ಗೆ 8 ಗಂಟೆಯಿಂದ 9 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿನ್ನೆಯೇ ಮನ್ಸೂಚನೆ ನೀಡಿತ್ತು. ಅದೇ ರೀತಿ ಇಂದು ವರುಣ ಆರ್ಭಟಿಸುತ್ತಿದ್ದಾನೆ.
![ಮುಂಬೈನಲ್ಲಿ ಕೊರೊನಾ ಅಟ್ಟಹಾಸದ ಮಧ್ಯೆ ಮಳೆಯ ಆರ್ಭಟ Heavy Rain In Mumbai](https://etvbharatimages.akamaized.net/etvbharat/prod-images/768-512-7871694-451-7871694-1593757740069.jpg)
ಮುಂಬೈನಲ್ಲಿ ಭಾರೀ ಮಳೆ
ನಗರದಲ್ಲಿ ಬೆಳಗ್ಗೆ 8 ಗಂಟೆಯಿಂದ 9 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿನ್ನೆಯೇ ಮನ್ಸೂಚನೆ ನೀಡಿತ್ತು. ಅದೇ ರೀತಿ ಇಂದು ಮುಂಜಾನೆಯಿಂದಲೇ ಮಳೆ ಶುರುವಾಗಿದೆ.
ಮುಂಬೈನಲ್ಲಿ ಭಾರೀ ಮಳೆ
ಬೆಳಗ್ಗೆ 8 ಗಂಟೆಯಿಂದ 9 ರ ನಡುವೆ, ಕೊಲಾಬಾದಲ್ಲಿ 24 ಮಿ.ಮೀ, ನಾರಿಮನ್ ಪಾಯಿಂಟ್‌ನಲ್ಲಿ 19 ಮಿ.ಮೀ ಮಳೆಯಾಗಿದೆ. ಮುಂಬೈ ಉಪನಗರಗಳಲ್ಲಿ ಕಡಿಮೆ ಮಳೆಯಾಗಿದೆ. ಮಳೆಯಿಂದ ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ. ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿರುವ ಮಧ್ಯೆ ಹೆಚ್ಚಿನ ಮಳೆಯಾದರೆ ಪರಿಸ್ಥಿತಿ ನಿರ್ವಹಣೆ ಮಾಡುವುದು ಸವಾಲಾಗಲಿದೆ.