ನವದೆಹಲಿ: ನಿರ್ಬಂಧಿತ ರಸ್ತೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಹಿಂದೂ ಸೇನೆ ನಡೆಸುತ್ತಿದ್ದ ಪ್ರತಿಭಟನೆ ಕೈಬಿಟ್ಟಿದ್ದರೂ ಸಹ, ಶಾಹೀನ್ ಬಾಗ್ ಪ್ರದೇಶದಲ್ಲಿ ಇಂದು ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜಿಸಿ ಸೆಕ್ಷನ್ 144 ವಿಧಿಸಲಾಗಿದೆ.
ಪೌರತ್ವ ವಿರೋಧಿ ಪ್ರತಿಭಟನೆ: ಶಾಹೀನ್ ಬಾಗ್ ಬಳಿ ನಿಷೇಧಾಜ್ಞೆ,ಹೆಚ್ಚಿದ ಪೊಲೀಸ್ ಭದ್ರತೆ - ಶಾಹೀನ್ ಬಾಗ್ ಲೇಟೆಸ್ಟ್ ನ್ಯೂಸ್
ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಶಾಹೀನ್ ಬಾಗ್ನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗಿದೆ.
![ಪೌರತ್ವ ವಿರೋಧಿ ಪ್ರತಿಭಟನೆ: ಶಾಹೀನ್ ಬಾಗ್ ಬಳಿ ನಿಷೇಧಾಜ್ಞೆ,ಹೆಚ್ಚಿದ ಪೊಲೀಸ್ ಭದ್ರತೆ Heavy police deployment in Shaheen Bagh,ಶಾಹೀನ್ ಬಾಗ್ ಬಳಿ ಸೆಕ್ಷನ್ 144 ಜಾರಿ](https://etvbharatimages.akamaized.net/etvbharat/prod-images/768-512-6254394-thumbnail-3x2-brm.jpg)
ಶಾಹೀನ್ ಬಾಗ್ ಬಳಿ ಸೆಕ್ಷನ್ 144 ಜಾರಿ
ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಜನ ಗುಂಪು ಸೇರಲು ಅನುಮತಿ ನೀಡಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ವಿರೋಧಿಸಿ ಕಳೆದ ವರ್ಷದ ಡಿಸೆಂಬರ್ನಿಂದ ಶಾಹೀನ್ ಬಾಗ್ನಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.