ಮುಂಬೈ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಭಾರಿ ಮಳೆಯಿಂದ ತಗ್ಗು ಪ್ರದೇಶಗಳು ಜಾವೃತಗೊಂಡಿದ್ದು, ರೈಲುಗಳ ಸಂಚಾರಕ್ಕೂ ಅಡಚಣೆಯುಂಟಾಗಿದೆ. ರೈಲ್ವೆ ಟ್ರ್ಯಾಕ್ಗಳು ಕಾಣದಂತೆ ನೀರು ತುಂಬಿಕೊಂಡಿದ್ದು ಹಲವು ರೈಲುಗಳು ಸಂಚರಿಸದೆ ನಿಲ್ದಾಣದಲ್ಲೇ ನಿಂತಿದ್ರೆ. ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.