ಕರ್ನಾಟಕ

karnataka

ETV Bharat / bharat

ಗಂಡನೇ ಇರೋದಿಲ್ಲ ಅಂದ್ಮೇಲೆ ನಾನೇಕೆ ಬದುಕಲೆಂದು ಪ್ರಾಣಬಿಟ್ಟ ಪತ್ನಿ.. - ಹೈದರಾಬಾದ್​ ಆತ್ಮಹತ್ಯೆ ಸುದ್ದಿ

ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೂ ಮೊದಲೇ ಇಹಲೋಕ ತ್ಯಜಿಸಬೇಕೆಂದು ನಿರ್ಧರಿಸಿದ್ದಾಳೆ. ಅದರಂತೆ ಆಕೆ ಗಂಡನಿಗೂ ಮೊದಲೇ ಪ್ರಾಣಬಿಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮನನೊಂದು ಗೃಹಿಣಿ ಆತ್ಮಹತ್ಯೆ

By

Published : Nov 19, 2019, 6:50 PM IST

ಹೈದರಾಬಾದ್​: ಗಂಡನಿಗೆ ಹೃದಯಾಘಾತ ಆಗಿರುವುದರಿಂದ ಆತಂಕಕ್ಕೊಳಗಾದ ಪತ್ನಿಯೊಬ್ಬಳು ಆತನಿಗೂ ಮೊದ್ಲೇ ಸಾಯಲು ಇಚ್ಛಿಸಿದ್ದಳು. ಅದರಂತೆ ಆಕೆ ಗಂಡನಿಗೂ ಮೊದ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್​ನ ಜೂಬ್ಲಿಹಿಲ್ಸ್​ನಲ್ಲಿ ನಡೆದಿದೆ.

ನಾರಾಯಣಪೇಟ ಜಿಲ್ಲೆಯ ನಾರಾಯಣಪೇಟ ಗ್ರಾಮದ ನಿವಾಸಿ ಸಿಂಧೂಜಾ ಹೈದರಾಬಾದ್​ನ ಶಿವಕುಮಾರ್ ಎಂಬುವರನ್ನು ವಿವಾಹವಾಗಿದ್ದರು. ಇವರಿಗೆ 13, 8 ವರ್ಷದ ಮಕ್ಕಳಿಬ್ಬರಿದ್ದಾರೆ. ಖಾಸಗಿ ಉದ್ಯೋಗ ಮಾಡುತ್ತಿರುವ ಶಿವಕುಮಾರ್​ಗೆ ನವೆಂಬರ್​ 12ರಂದು ಹೃದಾಯಾಘಾತವಾಗಿತ್ತು. ಗಂಡನ ಆರೋಗ್ಯ ವಿಷಯದಲ್ಲಿ ಸಿಂಧೂಜಾ ತೀವ್ರ ಆಘಾತಕೊಳ್ಳಗಾಗಿದ್ದರು.

ಸಿಂಧೂಜಾ ಇಷ್ಟಕ್ಕೆ ಸುಮ್ಮನಾಗದೇ ಮಾನಸಿಕವಾಗಿ ಕುಗ್ಗಿದ್ದರು. ತನ್ನ ತಾಯಿ ರತ್ನಾದೇವಿಗೆ ಫೋನ್​ ಮಾಡಿ ನನ್ನ ಗಂಡನ ಸಾವಿಗೂ ಮೊದ್ಲೇ ನಾನು ಪ್ರಾಣ ಬಿಡ್ತೀನಿ ಅಂತಾ ಹೇಳಿದ್ದರು. ಆಕೆಗೆ ತಾಯಿ ಧೈರ್ಯ ತುಂಬಿದ್ದರು. ಆದ್ರೂ ಸಹ ಸಿಂಧೂಜಾ ಸಮಾಧಾನವಾಗಿರಲಿಲ್ಲ.

ನವೆಂಬರ್​ 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆಕೆ ಸೋಮವಾರ ಮೃತಪಟ್ಟಿದ್ದಾರೆ. ಸಿಂಧೂಜಾ ತಾಯಿ ರತ್ನಾದೇವಿ ಜೂಬ್ಲಿಹಿಲ್ಸ್​ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.

ABOUT THE AUTHOR

...view details