ಕರ್ನಾಟಕ

karnataka

ETV Bharat / bharat

ಇಂದು ಸುಪ್ರೀಂನಲ್ಲಿ ರಾಜಸ್ಥಾನ ಸ್ಪೀಕರ್​ ಅರ್ಜಿ ವಿಚಾರಣೆ: ಅನರ್ಹರಿಗೆ ಸಿಗುತ್ತಾ ರಿಲೀಫ್​

ಸಚಿನ್ ಪೈಲಟ್ ನೇತೃತ್ವದ 19 ಕಾಂಗ್ರೆಸ್ ಶಾಸಕರ ಅನರ್ಹತೆ ವಿಚಾರಣೆಯನ್ನು ತಡೆಹಿಡಿದಿರುವ ಹೈಕೋರ್ಟ್ ಆದೇಶದ ವಿರುದ್ಧ ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಅವರು ಸಲ್ಲಿಸಿರುವ ಎಸ್ಎಲ್​ಪಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿದೆ.

ಸುಪ್ರೀಂನಲ್ಲಿ ಸ್ಪೀಕರ್​ ಅರ್ಜಿ ವಿಚಾರಣೆ
ಸುಪ್ರೀಂನಲ್ಲಿ ಸ್ಪೀಕರ್​ ಅರ್ಜಿ ವಿಚಾರಣೆ

By

Published : Jul 27, 2020, 10:15 AM IST

ನವದೆಹಲಿ: ಸಚಿನ್ ಪೈಲಟ್ ನೇತೃತ್ವದ 19 ಕಾಂಗ್ರೆಸ್ ಶಾಸಕರ ಅನರ್ಹತೆ ಕುರಿತು ನೀಡಿರುವ ನೋಟಿಸ್​​​​​​​​​​​​ಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಅವರು ಸಲ್ಲಿಸಿರುವ ಎಸ್ಎಲ್​ಪಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿದೆ.

ಸುಪ್ರೀಂಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆ ನಡೆಯಲಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅನರ್ಹ ಡಿಸಿಎಂ ಸಚಿನ್ ಪೈಲಟ್ ನಡುವಿನ ರಾಜಕೀಯ ಹೋರಾಟದಲ್ಲಿ ನಿರ್ಣಾಯಕ ತೀರ್ಪು ಇಂದು ಹೊರಬೀಳುವ ಸಾಧ್ಯತೆಯಿದೆ.

ಸಚಿನ್​ ಪೈಲಟ್ ಹಾಗೂ ಇತರ 18 ಶಾಸಕರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ನೀಡಿದ ದೂರುಗಳ ಮೇಲೆ ಸ್ಪೀಕರ್ ಸಿಪಿ ಜೋಶಿ ಅವರು ನೀಡಿದ ನೋಟಿಸ್‌ ಪ್ರಶ್ನಿಸಿ ಶಾಸಕರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಚಾರಣೆಯನ್ನು ತಡೆಹಿಡಿದು ಕೋರ್ಟ್​ ಆದೇಶ ನೀಡಿತ್ತು. ಈ ಬಳಿಕ ಸ್ಪೀಕರ್ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಹೈಕೋರ್ಟ್‌ನ ಯಥಾಸ್ಥಿತಿ ಆದೇಶವನ್ನ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ.

ಇನ್ನು ಈ ಸಂಬಂಧ ಈಗಾಗಲೇ ಹೇಳಿಕೆ ನೀಡಿರುವ ಸಿಪಿ ಜೋಶಿ, "ಸಂವಿಧಾನ ಪೀಠದ ಪ್ರಕಾರ, ನ್ಯಾಯಾಂಗವು ಸ್ಪೀಕರ್ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಶಾಸಕರಿಗೆ ಕಾನೂನು ಬದ್ಧವಾಗಿ ನೋಟಿಸ್ ನೀಡಿದ್ದೇನೆ. ಈ ವಿಷಯದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ನಮ್ಮ ಚುನಾಯಿತ ಪ್ರತಿನಿಧಿಗಳು ನ್ಯಾಯಾಂಗದ ಮೂಲಕ ತಪ್ಪಿಸಿಕೊಳ್ಳುತ್ತಿರುವುದು ದುರದೃಷ್ಟಕರ" ಎಂದು ತಿಳಿಸಿದ್ದಾರೆ.

ABOUT THE AUTHOR

...view details