ಕರ್ನಾಟಕ

karnataka

ETV Bharat / bharat

ಕೋವಿಡ್​ ಲಸಿಕೆ ಪಡೆಯಲು ಯುವಕರು 2022ರವರೆಗೆ ಕಾಯಬೇಕು: ವಿಶ್ವ ಆರೋಗ್ಯ ಸಂಸ್ಥೆ

ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟ ಮುಂದುವರೆದಿದೆ. ಇದರ ಮಧ್ಯೆ ಮುಂದಿನ ವರ್ಷದ ಆರಂಭದ ವೇಳೆಗೆ ವ್ಯಾಕ್ಸಿನ್​ ಹೊರ ಬರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಲಸಿಕೆ ಪಡೆದುಕೊಳ್ಳಲು ಯವಕರು 2022ರವರೆಗೆ ಕಾಯಬೇಕಾಗಿದೆ.

Dr Soumya Swaminathan
Dr Soumya Swaminathan

By

Published : Oct 15, 2020, 5:16 PM IST

ಜೀನಿವಾ:ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇಲ್ಲಿಯವರೆಗೆ ಅದಕ್ಕಾಗಿ ಯಾವುದೇ ದೇಶಗಳು ಲಸಿಕೆ ಕಂಡು ಹಿಡಿದಿಲ್ಲ. ಆದರೆ ಫ್ರಾನ್ಸ್​, ರಷ್ಯಾ, ಯುಕೆ,ಅಮೆರಿಕ ಹಾಗೂ ಭಾರತ ಸೇರಿದಂತೆ ಅನೇಕ ದೇಶಗಳು ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಮಗ್ನವಾಗಿವೆ. ಮುಂದಿನ ವರ್ಷದ ವೇಳೆಗೆ ವ್ಯಾಕ್ಸಿನ್​ ರಿಲೀಸ್​ ಆಗುವ ಸಾಧ್ಯತೆ ದಟ್ಟವಾಗಿದೆ.

ಇದೇ ವಿಷಯವಾಗಿ ಮಾತನಾಡಿರುವ ವಿಶ್ವ ಆರೋಗ್ಯ ಸ್ಥಂಸ್ಥೆ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್​, ಆರೋಗ್ಯವಂತ ಯುವಕರು ಕೋವಿಡ್​ ವ್ಯಾಕ್ಸಿನ್​​ ಪಡೆದುಕೊಳ್ಳಬೇಕಾದರೆ 2022ರವರೆಗೆ ಕಾಯಬೇಕು ಎಂದಿದ್ದಾರೆ. ಲಸಿಕೆ ಬಿಡುಗಡೆಗೊಳ್ಳುತ್ತಿದ್ದಂತೆ ಆರಂಭದಲ್ಲಿ ಹೆಲ್ತ್​ ಕೇರ್​​ ಸಿಬ್ಬಂದಿ, ಕೊರೊನಾ ವಾರಿಯರ್ಸ್​​, ವೃದ್ಧರು ಹಾಗೂ ಹೈರಿಸ್ಕ್​ ವ್ಯಕ್ತಿಗಳಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿರುವ ಕಾರಣ ಯುವ ಪೀಳಿಗೆ ಇದಕ್ಕಾಗಿ ಮತ್ತಷ್ಟು ವರ್ಷ ಕಾಯಬೇಕಾಗಿದೆ ಎಂದು ತಿಳಿಸಿದ್ದಾರೆ.

ಲಸಿಕೆಗೆ ಬಿಡುಗಡೆಗೊಳ್ಳುತ್ತಿದ್ದಂತೆ ಕೆಲವೊಂದು ಮಾರ್ಗಸೂಚಿ ರಿಲೀಸ್​ ಆಗಲಿದ್ದು, 2022ರವರೆಗೆ ಯುವಕರು ಕಾಯುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ಜನವರಿ ಅಥವಾ ಏಪ್ರಿಲ್​ ತಿಂಗಳ ವೇಳೆಗೆ ಕೋವಿಡ್​ ವ್ಯಾಕ್ಸಿನ್​ ಲಸಿಕೆ ನಮ್ಮ ಕೈಗೆ ಸಿಗಲಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ, ಇದು ಅಸಾಧ್ಯ ಎಂದಿರುವ ಸ್ವಾಮಿನಾಥ್​ನ ರಷ್ಯಾದಂತಹ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳು, ಅಂಗಡಿ ಸಿಬ್ಬಂದಿಗಳಿಗೆ ಈ ಲಸಿಕೆ ನೀಡಲು ನಿರ್ಧರಿಸಿದ್ದು, ಚೀನಾದಲ್ಲಿ ಯೋಧರಿಗೆ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಭಾರತದಲ್ಲಿ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರದ ವೈದ್ಯರು, ದಾದಿಯರು, ನೈರ್ಮಲ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಧಿಕಾರಿಗಳಿಗೆ ಆರಂಭದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ABOUT THE AUTHOR

...view details