ಕರ್ನಾಟಕ

karnataka

ETV Bharat / bharat

ಕೆಮಿಕಲ್​ ಆಹಾರದಿಂದಾಗುವ ಅಪಾಯದ ಕುರಿತು ಗಮನ ಹರಿಸಿದ ಕೇಂದ್ರ - Irrespective of geographical boundaries

ಯಾವುದೇ ಭೌಗೋಳಿಕ ಪ್ರದೇಶವಾದರೂ ಸರಿ ಆಹಾರ ಮತ್ತು ಆರೋಗ್ಯ ಇವೆರಡೂ ಎಲ್ಲ ಕಡೆ ಅತ್ಯಂತ ಪ್ರಮುಖವಾದ ಆದ್ಯತೆಗಳಾಗಿವೆ. ದೇಶೀಯವಾಗಿ ಬೆಳೆಯುತ್ತಿರುವ ಕೆಮಿಕಲ್ ಇರುವ ಆಹಾರದಿಂದ ದೇಹಕ್ಕೆ ಆಗುತ್ತಿರುವ ಅಪಾಯದ ಬಗ್ಗೆ ಕೇಂದ್ರ ಸರ್ಕಾರವು ಗಮನ ಹರಿಸಿದ್ದು, ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

Healthy Diet: Irrespective of geographical boundaries
ಕೆಮಿಕಲ್​ ಆಹಾರದಿಂದಾಗುವ ಅಪಾಯದ ಕುರಿತು ಗಮನ ಹರಿಸಿದ ಕೇಂದ್ರ

By

Published : May 27, 2020, 5:03 PM IST

ಯಾವುದೇ ಭೌಗೋಳಿಕ ಪ್ರದೇಶವಾದರೂ ಸರಿ ಆಹಾರ ಮತ್ತು ಆರೋಗ್ಯ ಇವೆರಡು ಎಲ್ಲ ಕಡೆ ಅತ್ಯಂತ ಪ್ರಮುಖವಾದ ಆದ್ಯತೆಗಳಾಗಿವೆ. ದೇಶೀಯವಾಗಿ ಬೆಳೆಯುತ್ತಿರುವ ಕೆಮಿಕಲ್ ಯುಕ್ತ ಆಹಾರದಿಂದ ದೇಹಕ್ಕೆ ಆಗುತ್ತಿರುವ ಅಪಾಯದ ಬಗ್ಗೆ ಕೇಂದ್ರ ಸರ್ಕಾರವು ಗಮನ ಹರಿಸಿದ್ದು, ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಅಕ್ಕಿ, ಬೇಳೆಕಾಳುಗಳು, ತರಕಾರಿಗಳು ಮತ್ತು ಇತರ ಬೆಳೆಗಳಿಗೆ ಸಿಂಪಡಿಸಲಾಗುತ್ತಿರುವ 27 ಬಗೆಯ ವಿಷಕಾರಿ ರಾಸಾಯನಿಕ ಕೀಟನಾಶಕಗಳನ್ನು ನಿಷೇಧಿಸುವ ಕರಡು ಶಾಸನವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಕೀಟನಾಶಕಗಳ ನಿಷೇಧದ ನಿರ್ಣಯದ ಬಗ್ಗೆ ಆಕ್ಷೇಪಣೆ ಸಲ್ಲಿಸಲು 45 ದಿನಗಳ ಕಾಲಾವಕಾಶ ನೀಡಿರುವ ಕೇಂದ್ರ ಸರ್ಕಾರವು ಬಳಿಕ ಅವುಗಳ ಪರಿಶೀಲನೆ ನಡೆಸಿ ಜುಲೈನಲ್ಲಿ ಅಂತಿಮ ಆದೇಶ ಹೊರಡಿಸಲಿದೆ.

ಅನೇಕ ದೇಶಗಳು ಈಗಾಗಲೇ ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಇರುವ ವಿಷಕಾರಕ ಕೀಟನಾಶಕಗಳನ್ನ ನಿಷೇಧಿಸಿವೆ. ಜೇನುನೊಣಗಳು ಮತ್ತು ಪಕ್ಷಿಗಳಿಗೆ ಹಾನಿಕಾರಕವಾದ ಕಾರ್ಬೋಫುರಾನ್ ವಿಷಕಾರಿ ಕೀಟನಾಶಕ ಬಳಕೆಯನ್ನು 63 ದೇಶಗಳು ನಿಷೇಧಿಸಿವೆ. 45 ದೇಶಗಳು ಡಿಕ್ಲೋಫೆನಾಕ್ ಅನ್ನು ನಿಷೇಧಿಸಿವೆ. 35 - ಮೆಥೊಮಿಲ್, 32 - ಅಸೆಫೇಟ್, ಮತ್ತು 30 ದೇಶಗಳು ಕ್ವಿನಾಲ್ಫೋಸ್ ಅನ್ನು ನಿರ್ಬಂಧಗಳ ಪಟ್ಟಿಗೆ ಸೇರಿಸಿದೆ.

ರೈತರು ತಾವು ಬೆಳೆಯುವ ಬೆಳೆಯಲ್ಲಿ ಕೀಟಗಳ ತಡೆಗಟ್ಟುವಿಕೆಗಾಗಿ ಹಣ್ಣುಗಳು, ತರಕಾರಿಗಳು ಮತ್ತು ವಿವಿಧ ಬೆಳೆಗಳ ಮೇಲೆ ಸಿಂಪಡಿಸುವ ಕೀಟನಾಶಕಗಳ ಉಳಿದ ಅಂಶವು ಆಹಾರದ ಮೂಲಕ ನೇರವಾಗಿ ಸೇವಿಸುವ ಜನರ ದೇಹಕ್ಕೆ ಪ್ರವೇಶಿಸಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತವೆ. ಆಹಾರದ ಮೇಲೆ ಉಳಿದ ಕೀಟನಾಶಕದ ವಿಷವು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹಲವು ತಜ್ಞರು ದೀರ್ಘಕಾಲದಿಂದ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ಆಹಾರದ ಮೇಲೆ ಉಳಿಕೆಯಾದ ವಿಷಕಾರಿ ರಾಸಾಯನಿಕಗಳ ಶೇಷವು ಕ್ಯಾನ್ಸರ್ ಮತ್ತು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಿದೆ.

ಜಗತ್ತಿನ ವಿವಿಧ ದೇಶಗಳಲ್ಲಿ ಬಳಸುವ ಸೋಂಕು ನಿವಾರಕಗಳು ವಾರ್ಷಿಕವಾಗಿ ಸುಮಾರು ಎರಡು ಲಕ್ಷ ಜನರ ಜೀವಗಳನ್ನು ಬಳಿ ಪಡೆಯುತ್ತವೆ ಎಂದು ವಿಶ್ವಸಂಸ್ಥೆ ಇತ್ತೀಚಿಗೆ ತಾನೇ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಘೋಷಿಸಿದೆ. ಅಧಿಕಾರಿಗಳನ್ನು ಆಕರ್ಷಿಸುವ ಮೂಲಕ ಆ ಕೆಮಿಕಲ್ ಕಂಪನಿಗಳು ಬಹು ವರ್ಷಗಳಿಂದ ವ್ಯಾಪಾರ ನಡೆಸುತ್ತಿವೆ. ಬಹುಕಾಲದಿಂದ ಜನರ ಜೀವ ತಿನ್ನುತ್ತಿರುವ ಈ ವಿಷಕಾರಿ ರಾಸಾಯನಿಕ ಸಮಸ್ಯೆಯನ್ನ ತಡೆಗಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರದ ಸಂಕಲ್ಪವನ್ನು ಎಲ್ಲರೂ ಸ್ವಾಗತಿಸಬೇಕು. ಇಂತಹ ರಾಸಾಯನಿಕಗಳ ಮೇಲೆ ರಾಜ್ಯಗಳು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿರುವುದರಿಂದ ಕೇಂದ್ರವು ಅವರನ್ನು ಸಂಪರ್ಕಿಸಿ ಅವರ ಬೆಂಬಲದೊಂದಿಗೆ ಮುಂದುವರಿಯಬೇಕು.

ತರಕಾರಿಗಳನ್ನು ವ್ಯಾಪಕವಾಗಿ ಬೆಳೆಯುವ ಜಾರ್ಖಂಡ್‌ ರಾಜ್ಯದ ರಾಂಚಿ ಬಳಿಯಿರುವ ಸ್ಥಳದಲ್ಲಿ ಈ ಹಿಂದೆ ನಡೆಸಿದ ಅಧ್ಯಯನವು ಕೀಟನಾಶಕಗಳನ್ನು ಹೇಗೆ ನಿರ್ದಾಕ್ಷಿಣ್ಯವಾಗಿ ಬಳಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಈ ಮಧ್ಯೆ, ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ವಿಷಕಾರಿ ಕೀಟನಾಶಕಗಳನ್ನು ಅವುಗಳ ವಿಷಕಾರಿ ಅಂಶ ಮತ್ತು ಜೀವಕ್ಕೆ ಕುತ್ತು ತರುವ ಅಂಶ ತಿಳಿಯದೇ ಕುರುಡಾಗಿ ಬೆಳೆಗಳಿಗೆ ಸಿಂಪಡಿಸಿ 60ಕ್ಕೂ ಹೆಚ್ಚು ಬೆಳೆಗಾರರು ಸಾವನ್ನಪ್ಪಿದ್ದರು.

ಕೇರಳದಲ್ಲಿ ಎಂಡೋಸಲ್ಫಾನ್ ಎಂಬ ವಿಷಕಾರಿ ರಾಸಾಯನಿಕವನ್ನು ವಿವೇಚನೆಯಿಲ್ಲದೇ ಬಳಸಿದ್ದರಿಂದ ಆ ರಾಜ್ಯದಲ್ಲಿ ಜೀವ ವೈವಿಧ್ಯತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಮೀನು, ಕಪ್ಪೆ, ಹಾವು, ಬಾವಲಿ, ಕಾಡು ಪ್ರಾಣಿಗಳನ್ನ ಕೊಂದಿದೆ. ಆ ದುಃಸ್ವಪ್ನವನ್ನು ನಿಜಕ್ಕೂ ಮರೆಯಲು ಸಾಧ್ಯವಿಲ್ಲ. ಅದರ ನಂತರವೂ ಅನೇಕ ರಾಜ್ಯಗಳು ಎಂಡೋಸಲ್ಫಾನ್ ಅನ್ನು ನಿರಂತರವಾಗಿ ಬಳಸುತ್ತಿರುವುದು ಆಘಾತಕಾರಿ ಮತ್ತು ನಿಜವಾಗಿಯೂ ಗಮನ ಹರಿಸಲೇಬೇಕಾದ ಸಂಗತಿಯಾಗಿದೆ.

ಕೇವಲ ಮೊನೊಕ್ರೊಟೊಫಾಸ್ ಮತ್ತು ಆಕ್ಸಿಫ್ಲೋರೋಫೆನ್​​ನಂತಹ ಕೀಟನಾಶಕಗಳ ಸಂಗ್ರಹ ಮತ್ತು ಸಾಗಣೆಯನ್ನು ನಿರ್ಬಂಧಿಸುವುದು ಸಾಕಾಗುವುದಿಲ್ಲ. ಅವುಗಳ ಉತ್ಪಾದನೆಯನ್ನು ಸಹ ಸಂಪೂರ್ಣ ನಿಲ್ಲಿಸಬೇಕು. 27 ಸೋಂಕು ನಿವಾರಕಗಳನ್ನು ನಿಷೇಧಿಸಿದರೆ ಸಾಲದು. ವಿದೇಶದಲ್ಲಿ ನಿರ್ಬಂಧ ಹೇರಲಾಗಿರುವ ನೂರಕ್ಕೂ ಹೆಚ್ಚು ಕೀಟನಾಶಕಗಳು ನಮ್ಮ ದೇಶದಲ್ಲಿ ಬಳಕೆಯಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿರುವ ತಜ್ಞರು ಅವುಗಳ ನಿಷೇಧಕ್ಕೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಒಂದು ನಿರ್ದಿಷ್ಟ ಕೀಟನಾಶಕವನ್ನು ಸಿಂಪಡಿಸಿದ ನಂತರ ಬೆಳೆ ಕೊಯ್ಲು ಮಾಡುವ ಸಮಯದ ಬಗ್ಗೆ ರೈತರಿಗೆ ಸ್ಪಷ್ಟವಾಗಿ ವಿವರಿಸಬೇಕು. ನ್ಯಾನೊ ರಾಸಾಯನಿಕ ಆಧಾರಿತ ಕೀಟನಾಶಕಗಳನ್ನು ಬಳಸಿದ ನಿಗದಿತ ಸಮಯದ ನಂತರ ಉಳಿಕೆಗಳ ಅಪಾಯವಿಲ್ಲ ಎಂದು ಹೇಳಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕಳೆಗಳನ್ನು ನಾಶಮಾಡಲು ಗ್ಲೈಫೋಸೇಟ್ ನಂತಹ ವಿಷಕಾರಿ ಉತ್ಪನ್ನಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ರೈತ ಬೆಳೆದ ಇಡೀ ಬೆಳೆ ಉತ್ಪನ್ನವನ್ನು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಷವಾಗಿ ಪರಿವರ್ತಿಸುವುದಲ್ಲದೆ, ಮಣ್ಣನ್ನು ನಿಷ್ಪ್ರಯೋಜಕವಾಗಿಸುವುದರ ಜೊತೆಗೆ ನೀರಿನ ಮಾಲಿನ್ಯಕ್ಕೆ ಕಾರಣವಾಗುತ್ತದೆ. ನೈಸರ್ಗಿಕ ಸಾವಯವ ಕೃಷಿಗೆ ಹೊಸ ಶಾಸಕಾಂಗದ ಚೌಕಟ್ಟಿನೊಂದಿಗೆ ಸುರಕ್ಷಿತ ಕೃಷಿಯ ಸಂಸ್ಕೃತಿಗೆ ಸರ್ಕಾರ ಮುಂದಾಗಬೇಕು. ಮಾಲಿನ್ಯವನ್ನು ತೊಡೆದು ಹಾಕಲು ಪ್ರಕೃತಿ, ಮಣ್ಣನ್ನು ಪುನಶ್ಚೇತನಗೊಳಿಸಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ವಿಷಕಾರಿ ಕೀಟನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ವಿತರಿಸಬೇಕು. ಆ ರೀತಿ ಆದಲ್ಲಿ ಮಾತ್ರ ಆರೋಗ್ಯಕರ ಆಹಾರ ಒದಗಿಸುವ ಸರ್ಕಾರದ ನಿರ್ಧಾರಕ್ಕೆ ಅರ್ಥ ಬರುತ್ತದೆ.

For All Latest Updates

TAGGED:

Healthy Diet

ABOUT THE AUTHOR

...view details