ಕರ್ನಾಟಕ

karnataka

ETV Bharat / bharat

ಕೇಂದ್ರ ಸಮೀಕ್ಷೆ: 1921 ಸಂಖ್ಯೆಯಿಂದ ಬರುತ್ತೆ ದೂರವಾಣಿ ಕರೆ! - 1921 ಸಂಖ್ಯೆಯಿಂದ ದೂರವಾಣಿ ಸಮೀಕ್ಷೆ

ಕೋವಿಡ್-19 ಕುರಿತು ದೂರವಾಣಿ ಸಮೀಕ್ಷೆ ನಡೆಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೀರ್ಮಾನಿಸಿದ್ದು, ನಿಮಗೆ ಬರುವ ದೂರವಾಣಿ ಕರೆ ಸ್ವೀಕರಿಸಿ ಮಾಹಿತಿ ನೀಡಿಬೇಕೆಂದು ಮನವಿ ಮಾಡಿದೆ.

COVID-19 telephonic survey
ಕೋವಿಡ್-19 ಕುರಿತು ದೂರವಾಣಿ ಸಮೀಕ್ಷೆ

By

Published : Apr 22, 2020, 6:20 PM IST

ನವದೆಹಲಿ: ಕೊರೊನಾ ವೈರಸ್ ರೋಗಲಕ್ಷಣಗಳ ಹರಡುವಿಕೆ ಬಗ್ಗೆ ನಾಗರಿಕರಿಂದ ಪ್ರತಿಕ್ರಿಯೆ ಪಡೆಯಲು ಕೈಗೊಳ್ಳುತ್ತಿರುವ ಸಮೀಕ್ಷೆಯಲ್ಲಿ ಜನರು ಭಾಗವಹಿಸಬೇಕೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೇಳಿಕೊಂಡಿದೆ.

'ಕೋವಿಡ್-19 ಕುರಿತು ದೂರವಾಣಿ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು,1921 ಸಂಖ್ಯೆಯಿಂದ ನಿಮ್ಮ ಮೊಬೈಲ್‌ಗೆ ದೂರವಾಣಿ ಕರೆ ಬರುತ್ತದೆ. ದಯವಿಟ್ಟು ಈ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿ' ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಟ್ವೀಟ್ ಮಾಡಿದೆ.

ಈ ಸಮೀಕ್ಷೆಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ನಡೆಸಲಿದ್ದು, 1921 ಸಂಖ್ಯೆಯಿಂದ ಮೊಬೈಲ್ ಫೋನ್‌ಗಳಿಗೆ ಕರೆಗಳು ಬರಲಿವೆ. ಇಂತಹ ಹೆಸರಿನಲ್ಲಿ ಯಾರಾದರು ಕಿಡಿಗೇಡಿಗಳು ಅಥವಾ ಬೇರೆ ಯಾವುದೇ ಸಂಖ್ಯೆಗಳಿಂದ ಬರುವ ಕರೆಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದೆ.

ABOUT THE AUTHOR

...view details