ಕರ್ನಾಟಕ

karnataka

ETV Bharat / bharat

ಜೂನ್​ 8ರಿಂದ ಶಾಪಿಂಗ್​​ ಮಾಲ್,​ ರೆಸ್ಟೋರೆಂಟ್​ ಓಪನ್​... ಹೊಸ ನಿಯಮ ಪ್ರಕಟಿಸಿದ ಕೇಂದ್ರ! - ಕೇಂದ್ರ ಸರ್ಕಾರ ಹೊಸ ನಿಯಮ

ಕೊರೊನಾ ಲಾಕ್​ಡೌನ್​ನಿಂದಾಗಿ ಕಳೆದ ಎರಡು ತಿಂಗಳಿಂದ ಬಂದ್​ ಆಗಿದ್ದ ಶಾಪಿಂಗ್​ ಮಾಲ್​, ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳು ಜೂನ್​ 8 (ಸೋಮವಾರ)ದಿಂದ ಓಪನ್​ ಆಗ್ತಿದ್ದು, ಕೇಂದ್ರ ಸರ್ಕಾರ ಹೊಸ ನಿಯಮ ಪ್ರಕಟಗೊಳಿಸಿದೆ.

restaurants, hotels
restaurants, hotels

By

Published : Jun 5, 2020, 12:40 AM IST

ನವದೆಹಲಿ:ದೇಶಾದ್ಯಂತ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​ ಇದೀಗ ಮತ್ತಷ್ಟು ಸಡಿಲಗೊಂಡಿದ್ದು ಜೂನ್​ 8ರಿಂದ ದೇಶಾದ್ಯಂತ ಮಾಲ್, ಹೋಟೆಲ್​, ರೆಸ್ಟೋರೆಂಟ್​ ಓಪನ್​ ಆಗ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ನಿಯಮ ಪ್ರಕಟಗೊಳಿಸಿದೆ.

ಕಳೆದ ಎರಡು ತಿಂಗಳಿಂದ ಬಂದ್​ ಆಗಿದ್ದ ಮಾಲ್​ಗಳು,ರೆಸ್ಟೋರೆಂಟ್​ಗಳು ಇದೀಗ ಓಪನ್​ ಆಗುತ್ತಿರುವ ಕಾರಣ ಕೇಂದ್ರ ಸರ್ಕಾರ ಮಹತ್ವದ ನಿಯಮ ಜಾರಿಗೊಳಿಸಿದ್ದು, ಇವುಗಳ ಪಾಲನೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ಪ್ರಮುಖವಾಗಿ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಿಗೆ ಕೊರೊನಾ ರೋಗಲಕ್ಷಣ ಇರದ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲು ಕೇಂದ್ರ ಸೂಚನೆ ನೀಡಿದೆ.

ಪ್ರಮುಖ ನಿಯಮಾವಳಿಗಳು ಇಂತಿವೆ

  • 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷದೊಳಗಿನ ಮಕ್ಕಳು ಹೋಗುವಂತಿಲ್ಲ.
  • 6 ಅಡಿ ಅಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
  • ಮಾಸ್ಕ್​ ಹಾಗೂ ಫೇಸ್​ ಕವರ್​ ಬಳಕೆ ಕಡ್ಡಾಯ
  • ಸ್ಯಾನಿಟೈಸರ್​​ನಿಂದ ನಿಯಮಿತವಾಗಿ ಕೈತೊಳೆದುಕೊಳ್ಳುವುದು
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧ
  • ಆರೋಗ್ಯ ಸೇತು ಬಳಕೆ ಕಡ್ಡಾಯ

ಶಾಪಿಂಗ್​ ಮಾಲ್‌ ನಿಯಮ ಇಂತಿವೆ

  • ಶಾಪಿಂಗ್​ ಮಾಲ್​ ಪ್ರವೇಶ ದ್ವಾರದ ಬಳಿ ಥರ್ಮಲ್​ ಸ್ಕ್ರೀನಿಂಗ್​, ಹ್ಯಾಂಡ್​ ಸ್ಯಾನಿಟೈಸರ್​ ಕಡ್ಡಾಯ
  • ಶಾಪಿಂಗ್ ಮಾಲ್​ ಒಳಗಡೆ ಮಾಸ್ಕ್​ ಧರಿಸುವುದು ಕಡ್ಡಾಯ
  • ಕೊರೊನಾ ನಿಯಂತ್ರಣ ಪೋಸ್ಟರ್​, ವಿಡಿಯೋ ಪ್ರದರ್ಶನ
  • ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ
  • ಪಾರ್ಕಿಂಗ್​ ಸ್ಥಳಗಳಲ್ಲಿ ಜನದಟ್ಟನೆ ನಿಯಂತ್ರಣ
  • ಪ್ರತ್ಯೇಕವಾಗಿ ಪ್ರವೇಶ ಹಾಗೂ ನಿರ್ಗಮನ ದ್ವಾರ ನಿರ್ಮಾಣ
  • ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ ಸಂಖ್ಯೆಯಲ್ಲಿ ಗ್ರಾಹಕರನ್ನ ಒಳಗಡೆ ಬಿಡುವುದು

ರೆಸ್ಟೋರೆಂಟ್​ನಲ್ಲಿ ಪಾಲಿಸಬೇಕಾದ ನಿಯಮ

  • ರೆಸ್ಟೋರೆಂಟ್​​ ಸಿಬ್ಬಂದಿ, ವೇಟರ್​ ಮಾಸ್ಕ್‌ ಹಾಗೂ ಗ್ಲೌಸ್‌ ಕಡ್ಡಾಯವಾಗಿ ಧರಿಸಿರಬೇಕು
  • ಕುಳಿತುಕೊಳ್ಳುವ ಆಸನಗಳ ಮಧ್ಯೆ ಸಾಮಾಜಿಕ ಅಂತರ
  • ಡಿಜಿಟಲ್‌ ಪಾವತಿ ಮಾಡಲು ಪ್ರೋತ್ಸಾಹ
  • ಗ್ರಾಹಕರು ಹೊರಟಾಗ ಟೇಬಲ್‌ ಸ್ಯಾನಿಟೈಸರ್‌ ಮೂಲಕ ಸ್ವಚ್ಛ
  • ಗ್ರಾಹಕರು ಕೂಡ ಎಲ್ಲ ಸಂದರ್ಭದಲ್ಲಿ ಮಾಸ್ಕ್ ಧರಿಸಲೇಬೇಕು.
  • ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಬರುವವರಿಗೆ ಪ್ರತ್ಯೇಕ ಪ್ರವೇಶ ಮತ್ತು ಪ್ರತ್ಯೇಕ ನಿರ್ಗಮನದ ವ್ಯವಸ್ಥೆ
  • ಹೋಟೆಲ್ ಮತ್ತು ರೆಸ್ಟೋರೆಂಟ್ ಬರುವ ಗ್ರಾಹಕರ ಐಡಿ, ವಿಳಾಸ, ಪ್ರಯಾಣದ ಹಿನ್ನೆಲೆ, ವೈದ್ಯಕೀಯ ಸ್ಥಿತಿ ಬಗ್ಗೆ ಸರಿಯಾದ ದಾಖಲೆ ಅಥವಾ ಮಾಹಿತಿ ಪಡೆದುಕೊಳ್ಳಬೇಕು

ABOUT THE AUTHOR

...view details