ನವದೆಹಲಿ:ಕೋವಿಡ್ -19 ಲಸಿಕೆಯನ್ನು ಸುಮಾರು ಒಂದು ವಾರದೊಳಗೆ ಹೊರತರಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, ಆದರೆ ಬಿಡುಗಡೆ ದಿನಾಂಕದ ಕುರಿತು ಇನ್ನಷ್ಟೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.
ಒಂದು ವಾರದಲ್ಲಿ ಕೋವಿಡ್-19 ಲಸಿಕೆ ಹೊರತರಲು ಆರೋಗ್ಯ ಸಚಿವಾಲಯ ಸಿದ್ಧ! - ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆಯನ್ನು ಪರಿಚಯಿಸಲು ಆರೋಗ್ಯ ಸಚಿವಾಲಯ ಸಿದ್ಧವಾಗಿದೆ. ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರು ವ್ಯಾಕ್ಸಿನೇಷನ್ ಡ್ರೈವ್ಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ಅವರ ಡೇಟಾಬೇಸ್ ಅನ್ನು ಕೋ-ವಿನ್ ಲಸಿಕೆ ವಿತರಣಾ ನಿರ್ವಹಣಾ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದಿದ್ದಾರೆ.
"ವ್ಯಾಕ್ಸಿನೇಷನ್ ಡ್ರೈವ್ನ ಚಾಲನೆಯ ಪ್ರತಿಕ್ರಿಯೆಯ ಆಧಾರದ ಮೇಲೆ, ತುರ್ತು ಬಳಕೆಯ ದೃಢೀಕರಣದ ದಿನಾಂಕದಿಂದ 10 ದಿನಗಳಲ್ಲಿ ಕೋವಿಡ್-19 ಲಸಿಕೆಯನ್ನು ಪರಿಚಯಿಸಲು ಆರೋಗ್ಯ ಸಚಿವಾಲಯ ಸಿದ್ಧವಾಗಿದೆ. ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ" ಎಂದು ರಾಜೇಶ್ ಭೂಷಣ್ ಹೇಳಿದರು.