ನವದೆಹಲಿ:ಕೋಳಿ ಸೇರಿದಂತೆ ಇತರ ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಕೊಲಿಸ್ಟಿನ್ ಎಂಬ ಆ್ಯಂಟಿ ಬಯೋಟಿಕ್ನ (ಪ್ರತಿರೋಧಕ) ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ಆರೋಗ್ಯ ಇಲಾಖೆ ಬ್ಯಾನ್ ಮಾಡಿದೆ.
ಕೋಳಿಗಳಿಗೆ ನೀಡುತ್ತಿದ್ದ ಕೊಲಿಸ್ಟಿನ್ ಆ್ಯಂಟಿ ಬಯೋಟಿಕ್ ಬ್ಯಾನ್ ಮಾಡಿದ ಆರೋಗ್ಯ ಇಲಾಖೆ - ಕೊಲಿಸ್ಟಿನ್ ಆ್ಯಂಟಿಬಯೋಟಿಕ್ ಬ್ಯಾನ್
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಆರೋಗ್ಯ ಇಲಾಖೆ, ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಕೊಲಿಸ್ಟಿನ್ ಆ್ಯಂಟಿ ಬಯೋಟಿಕ್ ಬ್ಯಾನ್ ಮಾಡಿದೆ.
ಕೋಳಿ ಸಾಕಣೆ ಕೇಂದ್ರ ಹಾಗೂ ಆಕ್ವಾ ಕೃಷಿಯಲ್ಲಿ ಕೋಳಿಗಳಿಗೆ ರೋಗ ಬರದಂತೆ ತಡೆಯಲು ಮತ್ತು ಅವುಗಳು ದಷ್ಟಪುಷ್ಟವಾಗಿ ಬೆಳವಣಿಗೆ ಹೊಂದಲು ಹಾಗೂ ಅವನ್ನು ತಿನ್ನುವ ಮನುಷ್ಯರ ದೇಹದಲ್ಲಿ ಪ್ರತಿರೋಧ ವೃದ್ಧಿಸಲು ಈ ಕೊಲಿಸ್ಟಿನ್ ಎಂಬ ಆ್ಯಂಟಿ ಬಯೋಟಿಕ್ ನೀಡಲಾಗುತ್ತಿತ್ತು. 1940ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಅಡಿಯಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಮೇರೆಗೆ ಕೊಲಿಸ್ಟಿನ್ ಮೇಲೆ ನಿಷೇಧ ಹೇರಲಾಗಿದೆ.
ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದ ಬಳಿಕ ಈ ಅಧಿಸೂಚನೆ ಹೊರಡಿಸಲಾಗಿದೆ. ದೇಶದಲ್ಲಿ ಔಷಧಿಗಳಿಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳ ಬಗ್ಗೆ ಸರ್ಕಾರಕ್ಕೆ ಉನ್ನತ ಸಲಹೆಗಳನ್ನು ನೀಡುವ ಸಂಸ್ಥೆಯಾದ ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ ನೀಡಿದ ಮಾಹಿತಿಗಳನ್ನಾಧರಿಸಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇದನ್ನು ಬ್ಯಾನ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.