ನವದೆಹಲಿ : ಎರಡನೇ ಹಂತದ ಲಾಕ್ ಡೌನ್ ಮುಗಿಯಲು ಕೇವಲ ಎರಡು ದಿನಗಳು ಬಾಕಿ ಇರುವಾಗ, ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರುತಿಸಿರುವ ರೆಡ್, ಆರೆಂಜ್ ಮತ್ತು ಬಫರ್ ಝೋನ್ಗಳ ಮಾಹಿತಿ ನೀಡುವಂತೆ ತಿಳಿಸಿದೆ
ಕಂಟೇನ್ಮೆಂಟ್, ಬಫರ್ ಝೋನ್ಗಳ ಮಾಹಿತಿ ನೀಡಿ: ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ - ಬಫರ್ ಝೋನ್
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸುದನ್, ಜಿಲ್ಲೆಗಳಲ್ಲಿ ಗುರುತಿಸಿರುವ ರೆಡ್, ಆರೆಂಜ್ ಮತ್ತು ಬಫರ್ ಝೋನ್ಗಳ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
![ಕಂಟೇನ್ಮೆಂಟ್, ಬಫರ್ ಝೋನ್ಗಳ ಮಾಹಿತಿ ನೀಡಿ: ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ Health Ministry asks states to delineate containment areas, buffer zones](https://etvbharatimages.akamaized.net/etvbharat/prod-images/768-512-7014969-984-7014969-1588327169593.jpg)
ಈ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸುದನ್, ರೋಗಿಗಳ ಚೇತರಿಕೆ ಪ್ರಮಾಣ ಹೆಚ್ಚಾಗಿರುವುದರಿಂದ ಜಿಲ್ಲಾ ವ್ಯಾಪ್ತಿಗಳಲ್ಲಿ ಝೋನ್ಗಳ ಬದಲಾವಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ದೃಢಪಡಿಸಿದ ಪ್ರಕರಣಗಳು ಇಲ್ಲದಿದ್ದರೆ, ಅಥವಾ ಜಿಲ್ಲೆಯಲ್ಲಿ ಕಳೆದ 21 ದಿನಗಳಿಂದ ಯಾವುದೇ ಪ್ರಕರಣಗಳು ವರದಿಯಾಗಿಲ್ಲದಿದ್ದರೆ ಅವುಗಳನ್ನು ಗ್ರೀನ್ ಝೋನ್ ಅಡಿ ಪರಿಗಣಿಸಲಾಗುವುದು. ಒಂದು ಅಥವಾ ಹೆಚ್ಚಿನ ಪುರಸಭೆಗಳನ್ನು ಹೊಂದಿರುವ ಜಿಲ್ಲೆಗಳು ಪುರಸಭೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬಹುದು. ಇವುಗಳಲ್ಲಿ ಕಳೆದ 21 ದಿನಗಳಿಂದ ಯಾವುದೇ ಪ್ರಕರಣಗಳನ್ನು ವರದಿಯಾಗದಿದ್ದರೆ, ರೆಡ್ ಅಥವಾ ಆರೆಂಜ್ ಝೋನ್ಗಳಾಗಿದ್ದರೆ, ಅವುಗಳನ್ನು ಒಂದನೇ ಹಂತದ ವಲಯ ಎಂದು ಪರಿಗಣಸಬಹುದು ಎಂದು ತಿಳಿಸಿದ್ದಾರೆ.
ಪ್ರಕರಣಗಳನ್ನು ಪರಿಗಣಿಸಿಕೊಂಡು ವಾರಕೊಮ್ಮೆ ಝೋನ್ಗಳನ್ನು ಪರಿಷ್ಕರಣೆ ಮಾಡಲಾಗುವುದು. ಇತರ ಪ್ರಕ್ರಿಯೆಗಳು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ನಿರ್ದೇಶನಗಳಂತೆ ಮುಂದುವರೆಯುವುದು. ಮುಂದಿನ ತೀರ್ಮಾನಗಳನ್ನು ತಿಳಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.