ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಯ ಮೇಲ್ವಿಚಾರಣೆಯಲ್ಲಿ ಆಡಳಿತ ಮಂಡಳಿ ಒದಗಿಸಿದ ಮಾಹಿತಿಯ ಪ್ರಕಾರ, 2020 ರ ಜೂನ್ 30 ರ ವೇಳೆಗೆ ದೇಶದಲ್ಲಿ 12,55,786 ಅಲೋಪತಿ ವೈದ್ಯರು ನೋಂದಾಯಿಸಿಕೊಂಡಿದ್ದಾರೆ. ಅಂದರೆ, ಶೇ. 80 ರಷ್ಟು ವೈದ್ಯರ ಲಭ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು 10.05 ಲಕ್ಷ ವೈದ್ಯರು ಸಕ್ರಿಯ ಸೇವೆಗಾಗಿ ಲಭ್ಯವಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದು ವಿಶ್ವ ಸಂಸ್ಥೆಯ ವೈದ್ಯ-ಜನಸಂಖ್ಯಾ ಅನುಪಾತ 1:1000 ದ ವಿರುದ್ಧವಾಗಿ, ಪ್ರಸ್ತುತ ಇರುವ ದೇಶದ 135 ಕೋಟಿ ಅಂದಾಜು ಜನಸಂಖ್ಯೆಗೆ 1: 343 ಅನುಪಾತದಲ್ಲಿ ವೈದ್ಯರನ್ನು ಒದಗಿಸುತ್ತದೆ.
ಪ್ರಸ್ತುತ ದೇಶದಲ್ಲಿ ಸುಮಾರು 7.88 ಲಕ್ಷ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ( ಎಯುಹೆಚ್) ವೈದ್ಯರಿದ್ದಾರೆ. ಈ ಪೈಕಿ, ಸುಮಾರು 6.30 ಲಕ್ಷ ವೈದ್ಯರು ಸಕ್ರಿಯ ಸೇವೆಗೆ ಲಭ್ಯವಿದ್ದಾರೆ. ಅಲೋಪತಿ ವೈದ್ಯರು 1: 825 ಅನುಪಾತದಲ್ಲಿ ಇದ್ದಾರೆ.
ಕೋವಿಡ್-19 ಅಗತ್ಯ ವಸ್ತುಗಳ ಲಭ್ಯತೆ :
ವಿವಿಧ ಸರ್ಕಾರಿ (ಕೇಂದ್ರ ಮತ್ತು ರಾಜ್ಯ) ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ರಾಜ್ಯವಾರು ವಿವರಗಳು ಈ ರೀತಿಯಿದೆ (16 ಸೆ 2020 ರವರೆಗೆ)
ಕ್ರ.ಸಂ | ರಾಜ್ಯ/ ಕೇಂದ್ರಾಡಳಿತ ಪ್ರದೇಶ | ಐಸಿಯು ಬೆಡ್ | ವೆಂಟಿಲೇಟರ್ |
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪ | 18 | 18 |
2 | ಆಂಧ್ರ ಪ್ರದೇಶ | 1,367 | 484 |
3 | ಅರುಣಾಚಲ ಪ್ರದೇಶ | 43 | 11 |
4 | ಅಸ್ಸೋಂ | 329 | 278 |
5 | ಬಿಹಾರ | 218 | 262 |
6 | ಚಂಡೀಗಢ | 60 | 30 |
7 | ಚತ್ತೀಸ್ ಗಢ | 338 | 270 |
8 | ದಾದ್ರ & ನಗರ ಹವೇಲಿ | 46 | 46 |
9 | ದಮನ್ & ದಿಯು | 21 | 11 |
10 | ದೆಹಲಿ | 1,075 | 956 |
11 | ಗೋವಾ | 35 | 117 |
12 | ಗುಜರಾತ್ | 1,454 | 1,840 |
13 | ಹರಿಯಾಣ | 214 | 165 |
14 | ಹಿಮಾಚಲ ಪ್ರದೇಶ | 69 | 75 |
15 | ಜಮ್ಮು& ಕಾಶ್ಮೀರ | 284 | 236 |
16 | ಜಾರ್ಖಂಡ್ | 103 | 74 |
17 | ಕರ್ನಾಟಕ | 1,238 | 853 |
18 | ಕೇರಳ | 747 | 357 |
19 | ಲಡಾಖ್ | 31 | 25 |
20 | ಲಕ್ಷ ದ್ವೀಪ | 3 | 2 |
21 | ಮಧ್ಯಪ್ರದೇಶ | 721 | 308 |
22 | ಮಹಾರಾಷ್ಟ್ರ | 4,039 | 2,848 |
23 | ಮಣಿಪುರ | 20 | 24 |
24 | ಮೇಘಾಲಯ | 69 | 71 |
25 | ಮಿಝೋರಾಂ | 40 | 58 |
26 | ನಾಗಾಲ್ಯಾಂಡ್ | 50 | 25 |
27 | ಒಡಿಶ್ಶಾ | 222 | 140 |
28 | ಪುದುಚೇರಿ | 57 | 50 |
29 | ಪಂಜಾಬ್ | 348 | 111 |
30 | ರಾಜಸ್ಥಾನ | 939 | 602 |
31 | ಸಿಕ್ಕಿಂ | 20 | 57 |
32 | ತಮಿಳುನಾಡು | 3,595 | 2,134 |
33 | ತೆಲಂಗಾಣ | 815 | 303 |
34 | ತ್ರಿಪುರ | 73 | 19 |
35 | ಉತ್ತರ ಪ್ರದೇಶ | 2,110 | 1,512 |
36 | ಉತ್ತರಾಖಂಡ | 376 | 423 |
37 | ಪಶ್ಚಿಮ ಬಂಗಾಳ | 406 | 340 |
ಧನ ಸಹಾಯ:
ಕೋವಿಡ್-19 ರೋಗ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಎನ್ಹೆಚ್ಎಂ ಅಡಿಯಲ್ಲಿ 2019-20 ಅವಧಿಯಲ್ಲಿ 1,113.21 ಕೋಟಿ ರೂ. ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ. ಜನವರಿ 2020 ರಿಂದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಪೂರೈಸಲು ಸರ್ಕಾರ ಆದೇಶಿಸಿದೆ.
ಕ್ರ.ಸಂ | ವಸ್ತುಗಳು | ಪ್ರಮಾಣ | ಮೌಲ್ಯ ( ಕೋಟಿಗಳಲ್ಲಿ) |
1 | ಎನ್-95 ಮಾಸ್ಕ್ | 45909199 | 491.15 |
2 | ಪಿಪಿಇ ಕಿಟ್ | 13222688 | 1963.41 |
3 | ವೆಂಟಿಲೇಟರ್ | 600963 | 2568.40 |
ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ನೆರವಿನ ಪ್ಯಾಕೇಜ್ ಅಡಿಯಲ್ಲಿ ಕೇಂದ್ರ ಸರ್ಕಾರದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದ ಧನ ಸಹಾಯದ ಅಂಕಿ ಅಂಶಗಳು ಹೀಗಿವೆ.
ಕ್ರ.ಸಂ | ರಾಜ್ಯ/ ಕೇಂದ್ರಾಡಳಿತ ಪ್ರದೇಶ | 2020-21 |
1 | ಅಂಡಮಾನ್ & ನಿಕೋಬಾರ್ | 9.82 |
2 | ಆಂಧ್ರ ಪ್ರದೇಶ | 199.87 |
3 | ಅರುಣಾಚಲ ಪ್ರದೇಶ | 17.11 |
4 | ಅಸ್ಸೋಂ | 119.10 |
5 | ಬಿಹಾರ | 113.31 |
6 | ಚಂಡೀಗಢ | 9.39 |
7 | ಚತ್ತೀಸ್ ಗಢ | 41.89 |
8 |