ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ ಕೇವಲ ಮಾಧ್ಯಮಗಳ ಹೆಡ್ಲೈನ್ಗೆ ಮಾತ್ರ ಸೀಮಿತ, ಈ ಬಗ್ಗೆ ರಾಷ್ಟ್ರ ಮತ್ತು ಪಕ್ಷ ಪ್ರತಿಕ್ರಿಯಿಸಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಆತ್ಮಿಯ ಪ್ರಧಾನಿಗಳೇ ನೀವು ಇಂದು ದೇಶವನ್ನುದ್ದೇಶಿ ಹೇಳಿದ್ದು ಕೇವಲ ಮಾಧ್ಯಮಗಳ ಹೆಡ್ಲೈನ್ ಮಾತ್ರ ನೀಡುತ್ತದೆ. ಖಾಲಿ ಪುಟವನ್ನು ಜನರ ಹೃತ್ಪೂರ್ವಕ ಸಹಾಯದಿಂದ ತುಂಬಿದ್ದೀರ, ಇದಕ್ಕೆ ಇಡೀ ರಾಷ್ಟ್ರ ಮತ್ತು ಕಾಂಗ್ರೆಸ್ ಪ್ರತಿಕ್ರಿಯಿಸಲಿದೆ ಎಂದಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಸುರ್ಜೇವಾಲ, ವಲಸೆ ಕಾರ್ಮಿಕರು ನಡೆದುಕೊಂಡು ಮನೆ ಸೇರುತ್ತಿರುವುದು ಮಹಾ ದುರಂತ. ಈ ಸಂದರ್ಭದಲ್ಲಿ ಸಹಾನುಭೂತಿ, ಕಾಳಜಿ ಮತ್ತು ಅವರ ಸುರಕ್ಷಿತ ಮರಳುವಿಕೆ ಅಗತ್ಯವಾಗಿದೆ. ಆದರೆ, ನಿಮ್ಮ ಪರಾನುಭೂತಿ ಸೂಕ್ಷ್ಮತೆಯ ಕೊರತೆಯಿಂದ ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳಲು ಆಗದಿರುವುದು ಭಾರತವನ್ನು ನಿರಾಶೆಗೊಳಿಸಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಪ್ರಧಾನಿ ಮೋದಿಯವರ ಭಾಷಣವನ್ನು ಒಂದೇ ಪದದಲ್ಲಿ ವಿವರಿಸುವುದಾದರೆ ಹೆಡ್ಲೈನ್ ಹಂಟಿಂಗ್ ಎನ್ನಬಹುದು, ಪ್ರಧಾನಿ ಘೋಷಿಸಿರುವ 20 ಲಕ್ಷ ಕೋಟಿಯ ವಿವರವಿಲ್ಲ ಎಂದು ಬರೆದುಕೊಂಡಿದ್ದಾರೆ.
ಮಂಗಳವಾರ ರಾತ್ರಿ ದೇಶವನ್ಜುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, 20 ಲಕ್ಷ ಕೋಟಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದು ದೇಶದ ಒಟ್ಟು ಜಿಡಿಪಿಯ ಶೇ.10ರಷ್ಟು ಆಗಲಿದೆ.