ಕರ್ನಾಟಕ

karnataka

ETV Bharat / bharat

ಎಸ್​ಐ ರಿವಾಲ್ವರ್​ನಿಂದ ತಲೆಗೆ ಶೂಟ್​ ಮಾಡಿಕೊಂಡ ಮುಖ್ಯಪೇದೆ! - ತಲೆಗೆ ಶೂಟ್​ ಮಾಡಿಕೊಂಡ ಮುಖ್ಯೆಪೇದೆ

ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆಯೊಬ್ಬರು ತಮ್ಮ ಎಸ್​ಐ ರಿವಾಲ್ವರ್​ನಿಂದ ತಲೆಗೆ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮುಖ್ಯೆಪೇದೆ

By

Published : Sep 18, 2019, 2:14 PM IST

Updated : Sep 18, 2019, 11:10 PM IST

ನಿಜಾಮಾಬಾದ್​:ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆಯೊಬ್ಬರು ಎಸ್​ಐ ರಿವಾಲ್ವರ್​ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಇಂದಲ್ವಾಯ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮುಖ್ಯ ಪೇದೆ ಪ್ರಕಾಶ್​ ರೆಡ್ಡಿ ಎಂದಿನಂತೆ ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದ್ರೆ ಏನಾಯ್ತೋ ಏನೋ ತಿಳಿದಿಲ್ಲ. ಎಸ್​ಐ ಅವರ ರಿವಾಲ್ವರ್​ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ಪ್ರಕಾಶ್ ​ರೆಡ್ಡಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕಾಶ್​ ರೆಡ್ಡಿಗೆ ಮಗ, ಮಗಳು ಇದ್ದಾರೆ. ಸುದ್ದಿ ತಿಳಿದ ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತ್ಮಹತ್ಯೆ ಬಗ್ಗೆ ನಿಖರ ಕಾರಣ ತಿಳಿದು ಬರಬೇಕಾಗಿದ್ದು, ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated : Sep 18, 2019, 11:10 PM IST

ABOUT THE AUTHOR

...view details