ಸೀತಾಪುರ (ಉತ್ತರ ಪ್ರದೇಶ):ಲಾಕ್ಡೌನ್ ಸಮಯದಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಹಿರಿಯ ಸಬ್-ಇನ್ಸ್ಪೆಕ್ಟರ್ ಮೇಲೆ ಹೆಡ್ ಕಾನ್ಸ್ಟೇಬಲ್ ಒಬ್ಬರು ಲಾಠಿಯಿಂದ ಹಲ್ಲೆ ಮಾಡಿದ ಘಟನೆ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.
ಹಿರಿಯ ಸಬ್ಇನ್ಸ್ಪೆಕ್ಟರ್ ಗೆ ಹಿಗ್ಗಾ-ಮುಗ್ಗಾ ಥಳಿಸಿದ ಕಾನ್ಸ್ಟೇಬಲ್..! ವಿಡಿಯೋ ವೈರಲ್
ಕೊಟ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಸಬ್ಇನ್ಸ್ಪೆಕ್ಟರ್ ಒಬ್ಬರ ಮೇಲೆ ಹೆಡ್ ಕಾನ್ಸ್ಟೇಬಲ್ ಲಾಠಿಯಿಂದ ಹಲ್ಲೆ ಮಾಡಿದ್ದು, ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಬಳಿಕ ಕೊಟ್ವಾಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ನನ್ನು ಅಮಾನತುಗೊಳಿಸಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾನ್ಸ್ಟೆಬಲ್ ತನ್ನ ಹಿರಿಯ ಅಧಿಕಾರಿ ಹೊಡೆಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಲ್.ಆರ್. ಕುಮಾರ್, ಲಾಕ್ಡೌನ್ ಸಮಯದಲ್ಲಿ ಸರಿಯಾದ ತಪಾಸಣೆ ನಡೆಸದ ಕಾರಣ ಹಿರಿಯ ಸಬ್ ಇನ್ಸ್ಪೆಕ್ಟರ್ ರಮೇಶ್ ಚೌಹಾಣ್, ಹೆಡ್ ಕಾನ್ಸ್ಟೇಬಲ್ ರಾಮಶ್ರೇ ಅವರನ್ನು ಗದರಿಸಿದ್ದಾರೆ, ಇದರಿಂದ ಆಕ್ರೋಶಗೊಂಡ ಹೆಡ್ ಕಾನ್ಸ್ಟೆಬಲ್ ಲಾಠಿಯಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.