ಕರ್ನಾಟಕ

karnataka

ETV Bharat / bharat

ಅಭಿಷೇಕ್​ ಬಚ್ಚನ್​ ಸೋಂಕಿನಿಂದ ಶೀಘ್ರ ಗುಣಮುಖರಾಗುತ್ತಾರೆ: ಬಿಗ್ ಬುಲ್ ತಂಡ - ಬಾಲಿವುಡ್ ನಿರ್ಮಾಪಕ

ಅಭಿಷೇಕ್ ಬಚ್ಚನ್ ಅಭಿನಯದ ಬಿಗ್​ಬುಲ್​ ಚಿತ್ರ ಬಿಡುಗಡೆಗೆ ತಯಾರಿದ್ದು, ಅವರು ಸೋಂಕಿನಿಂದ ಗುಣಮುಖರಾಗುತ್ತಾರೆ ಎಂದು ಚಿತ್ರ ನಿರ್ಮಾಪಕ ಆನಂದ್ ಪಂಡಿತ್ ಭರವಸೆ ವ್ಯಕ್ತಪಡಿಸಿದ್ದಾರೆ.

Abhishek Bachchan
ಅಭಿಷೇಕ್​ ಬಚ್ಚನ್

By

Published : Aug 6, 2020, 12:06 PM IST

ಮುಂಬೈ:ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕುಟುಂಬ ಕೊರೊನಾ ವೈರಸ್​ನಿಂದ ಪಾರಾಗಿದ್ದು, ಅಭಿಷೇಕ್​ ಬಚ್ಚನ್ ಐಸೋಲೇಷನ್​ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗಲೆಲ್ಲ ಸಿನಿಮಾ ಸೆಟ್​​ನಲ್ಲಿ ಇದ್ದಂತೆಯೇ ಸಕಾರಾತ್ಮವಾಗಿಯೇ ಮಾತನಾಡುತ್ತಾರೆ ಎಂದು ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಹೇಳಿದ್ದಾರೆ.

ಸದ್ಯಕ್ಕೆ ಅಭಿಷೇಕ್​ ಬಚ್ಚನ್ ಅವರು ಆನಂದ್ ಪಂಡಿತ್ ನಿರ್ಮಾಪಕರಾಗಿ ಬಿಗ್​ ಬುಲ್​ ಚಿತ್ರದಲ್ಲಿ ನಟಿಸಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಇಡೀ ಸಿನಿಮಾ ಉದ್ಯಮ ಹಾಗೂ ಅವರ ಅಭಿಮಾನಿಗಳು ಅಭಿಷೇಕ್​ ಗುಣಮುಖರಾಗಿ ಬರುವುದನ್ನೇ ಕಾಯುತ್ತಿದ್ದಾರೆ. ಅವರು ಶೀಘ್ರವಾಗಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಾರೆ ಎಂದು ನಿರ್ಮಾಪಕ ಆನಂದ್ ಪಂಡಿತ್ ಇನ್​​ಸ್ಟಾಗ್ರಾಂನಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಬಿಗ್​ ಬುಲ್ ಸಿನಿಮಾ ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಕೂಕಿ ಗುಲ್ಟಿ ನಿರ್ದೇಶಿಸಿದ್ದಾರೆ. ಈ ಚಿತ್ರ 1992ರ ಭಾರತೀಯ ಭದ್ರತಾ ಹಗರಣದ ಕತೆ ಆಧರಿಸಿದೆ.

ಬಚ್ಚನ್​ ಕುಟುಂಬದ ಅಮಿತಾಬ್​ ಬಚ್ಚನ್, ಅಭಿಷೇಕ್​ ಬಚ್ಚನ್​, ಐಶ್ವರ್ಯ ರೈ ಬಚ್ಚನ್​ ಹಾಗೂ ಆರಾಧ್ಯಾಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ಹಿಂದೆ ಅಭಿಷೇಕ್​ ಹೊರತುಪಡಿಸಿ ಉಳಿದೆಲ್ಲರೂ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಈಗ ಸದ್ಯಕ್ಕೆ ಅಭಿಷೇಕ್​ ಬಚ್ಚನ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

ABOUT THE AUTHOR

...view details