ನಾಗಪುರ (ಮಹಾರಾಷ್ಟ್ರ): 2012ರಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಕ್ಯಾಬಿನೆಟ್ ಮಂತ್ರಿ ಯಶೋಮತಿ ಠಾಕೂರ್ ಅವರಿಗೆ ನೀಡಲಾಗಿದ್ದ 3 ತಿಂಗಳ ಜೈಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ನ ನಾಗಪುರ ಪೀಠ ತಡೆ ಹಿಡಿದಿದೆ.
ಅಕ್ಟೋಬರ್ 15ರಂದು ಅಮರಾವತಿಯ ಸೆಷೆನ್ಸ್ ಕೋರ್ಟ್ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮತ್ತು ಸಚಿವೆಯ ಕಾರಿನ ಚಾಲಕ ಸೇರಿದಂತೆ ಮೂವರಿಗೆ ಪೊಲೀಸ್ ಮೇಲೆ ಹಲ್ಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಒಂದು ವಾರದ ಹಿಂದೆ ಸಚಿವೆ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಶಿಕ್ಷೆಯನ್ನು ರದ್ದು ಮಾಡಬೇಕೆಂದು ಮನವಿ ಮಾಡಿದ್ದರು. ಸಚಿವೆಯ ಪರ ವಕೀಲರಾದ ಸುಬೋಧ್ ಧರ್ಮಾಧಿಕಾರಿ ಹಾಗೂ ಅನಿಕೇತ್ ನಿಗಂ ವಾದ ಮಂಡನೆ ಮಾಡಿದ್ದರು.