ದೆಹಲಿ:ನಿರ್ಭಯಾ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮುಕೇಶ್ ಕುಮಾರ್ ತನ್ನ ಡೆತ್ ವಾರಂಟ್ಗೆ ತಡೆ ನೀಡಲು ಕೋರಿ ಸಲ್ಲಿಸಿದ್ದ ಕ್ಷಮಾಪಣ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ನಿರ್ಭಯಾ ಅಪರಾಧಿಗಳಿಗೆ ನಿಗಧಿಯಾಗಿರುವ ಮರಣದಂಡನೆಯಲ್ಲಿ ಯಾವುದೇ ದೋಷವಿಲ್ಲವೆಂದು ಜನವರಿ 7ರಂದು ನ್ಯಾ. ಮನಮೋಹನ್ ಮತ್ತು ಸಂಗೀತ ಧಿಂಗ್ರಾ ಸೆಹಗಲ್ ಅವರಿದ್ದ ನ್ಯಾಯಪೀಠ ತಿಳಿಸಿದೆ. ಆದರೆ, ದೆಹಲಿ ಸರ್ಕಾರ ಹೇಳುವ ಪ್ರಕಾರ ನಿರ್ಭಯ ಆರೋಪಿಗಳಲ್ಲಿ ಒಬ್ಬರಾದ ಮುಕೇಶ್ ಸಲ್ಲಿಸಿರುವ ಕ್ಷಮಾಪಣಾ ಅರ್ಜಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಆರೋಪಿಗಳನ್ನು ಗಲ್ಲಿಗೇರಿಸಲು ಆಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಮುಕೇಶ್ (32) ವಿನಯ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಮತ್ತು ಪವನ್ ಗುಪ್ತಾ (25) ಎಂಬ ನಾಲ್ವರು ಆರೋಪಿಗಳನ್ನು ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಬೇಕೆಂದು ಆದೇಶಿಸಿ ದೆಹಲಿ ನ್ಯಾಯಾಲಯ ಜನವರಿ 7 ರಂದು ಅವರ ಡೆತ್ ವಾರಂಟ್ ಹೊರಡಿಸಿತ್ತು. ಸದ್ಯ ಮುಕೇಶ್ ಸಲ್ಲಿಸಿರುವ ಅರ್ಜಿಯು ವಿಚಾರಣೆಯಲ್ಲಿದೆ. ಡೆತ್ ವಾರಂಟ್ ಜಾರಿಗೊಳಿಸುವ ಮುನ್ನ ನಿಯಮಗಳ ಪ್ರಕಾರ, ಕ್ಷಮಾಪಣಾ ಅರ್ಜಿಯ ಕುರಿತಾದ ಆದೇಶಕ್ಕೆ ಕಾಯಬೇಕಾಗುತ್ತದೆ ಎಂದು ದೆಹಲಿ ಸರ್ಕಾರ ಮತ್ತು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಕ್ಷಮಾಪಣಾ ಅರ್ಜಿ ವಿಚಾರಣೆಯ ಕಾರಣದಿಂದ ನಾಲ್ಕು ಅಪರಾಧಿಗಳಲ್ಲಿ ಯಾರನ್ನೂ ಜನವರಿ 22 ರಂದು ಗಲ್ಲಿಗೇರಿಸಲಾಗುವುದಿಲ್ಲ ಎಂದು ಜೈಲಿನಾಧಿಕಾರಿಗಳು ತಿಳಿಸಿದ್ದಾರೆ. ಈ ಹೇಳಿಕೆಗೆ ನ್ಯಾಯಾಲಯ ಕಾರವಾಗಿ ಪ್ರತಿಕ್ರಿಯಿಸಿದ್ದು, ನಿಮ್ಮ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವಂತೆ ಅಧಿಕಾರಿಗಳ ವಿರುದ್ದ ಕಿಡಿಕಾರಿದೆ. ಮೊದಲು ನಿಮ್ಮ ಮನೆಯೇ ಸರಿಯಾಗಿಲ್ಲ. ಹೀಗಿದ್ದಾಗ ಜನರು ನಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಕಾನೂನು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಈಗ ಅವರಲ್ಲಿ ಒಬ್ಬರು ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದಾರೆ. ಜೈಲು ನಿಯಮಗಳ ಪ್ರಕಾರ ನಾಲ್ವರಲ್ಲಿ ಯಾರನ್ನೂ ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ವಿಚಾರಣೆಯ ವೇಳೆ ದೆಹಲಿ ಸರ್ಕಾರದ ಸಲಹೆಗಾರ (ಕ್ರಿಮಿನಲ್) ರಾಹುಲ್ ಮೆಹ್ರಾ ಅವರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ''ಎಲ್ಲಾ ಅಪರಾಧಿಗಳು ಕರುಣೆ ಮನವಿಯನ್ನು ಸಲ್ಲಿಸುವವರೆಗೆ ನೀವು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ನಿಮ್ಮ ನಿಯಮಗಳು ಲಾಯಕ್ಕಿಲ್ಲ. ಹೀಗಾಗಿಯೇ ವ್ಯವಸ್ಥೆ ಕ್ಯಾನ್ಸರ್ ನಿಂದ ಬಳಲುತ್ತಿದೆ. ಇನ್ನೂ ಜೈಲು ಅಧಿಕಾರಿಗಳ ರಕ್ಷಣೆಯಲ್ಲಿ ಅಪರಾಧಿಗಳು ಮರಣದಂಡನೆಯನ್ನು ಮತ್ತಷ್ಟು ವಿಳಂಬಗೊಳಿಸಿಕೊಂಡು ಅರ್ಜಿಗಳ ಮುಸುಗಿನಲ್ಲಿ ಹೊರಬರಲು ಯತ್ನಿಸುತ್ತಿದ್ದಾರೆ ಎಂದು ಮೆಹ್ರ ಪೀಠ ಕಟುವಾಗಿ ಟೀಕಿಸಿದೆ.
ಜನವರಿ 22 ರಂದು ಮರಣದಂಡನೆಯಾಗಿದೆ. ಕ್ಷಮಾಪಣಾ ಮನವಿಯ ಮೇರೆಗೆ ಜನವರಿ 21 ರ ಮಧ್ಯಾಹ್ನದವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಮೆಹ್ರ ನ್ಯಾಯ ಪೀಠ ತಿಳಿಸಿತು.