ಜೈಪುರ:ಆರು ಬಿಎಸ್ಪಿ ಶಾಸಕರನ್ನು ಕಾಂಗ್ರೆಸ್ ವಿಲೀನಗೊಳಿಸುವುದರ ವಿರುದ್ಧ ಬಿಜೆಪಿ ಶಾಸಕ ಮದನ್ ದಿಲಾವರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಸೋಮವಾರ ವಿಲೇವಾರಿ ಮಾಡಿದ್ದು, ಕೇಸರಿ ಪಕ್ಷದ ಶಾಸಕರು ಸಲ್ಲಿಸಿದ ದೂರನ್ನು ಆಲಿಸುವಂತೆ ವಿಧಾನಸಭಾ ಸ್ಪೀಕರ್ ಅವರನ್ನು ಕೋರಿದೆ.
ಬಿಎಸ್ಪಿ - ಕಾಂಗ್ರೆಸ್ ವಿಲೀನ: ಬಿಜೆಪಿ ಅರ್ಜಿ ಪರಿಶೀಲಿಸಲು ಹೈಕೋರ್ಟ್ ಸೂಚನೆ - ಜೈಪುರ
ಆರು ಬಿಎಸ್ಪಿ ಶಾಸಕರನ್ನು ಕಾಂಗ್ರೆಸ್ ವಿಲೀನಗೊಳಿಸುವುದರ ವಿರುದ್ಧ ಬಿಜೆಪಿ ಶಾಸಕ ಮದನ್ ದಿಲಾವರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಸೋಮವಾರ ವಿಲೇವಾರಿ ಮಾಡಿದ್ದು, ಕೇಸರಿ ಪಕ್ಷದ ಶಾಸಕರು ಸಲ್ಲಿಸಿದ ದೂರನ್ನು ಆಲಿಸುವಂತೆ ವಿಧಾನಸಭಾ ಸ್ಪೀಕರ್ ಅವರನ್ನು ಕೋರಿದೆ.
ಅರ್ಹತೆ ಕುರಿತು ಮೂರು ತಿಂಗಳೊಳಗೆ ತೀರ್ಮಾನಿಸಲು ನ್ಯಾಯಾಲಯ ಸ್ಪೀಕರ್‌ಗೆ ಸೂಚಿಸಿದೆ. ನ್ಯಾಯಾಲಯವು ಮದನ್ ದಿಲಾವರ್ ಅವರ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದೆ. ಮಾರ್ಚ್ 16ರಂದು ಸಲ್ಲಿಸಿದ ದೂರಿನಲ್ಲಿ ವಿಚಾರಣೆ ನಡೆಸಿ ಮೂರು ತಿಂಗಳೊಳಗೆ ಅರ್ಹತೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ವಿಧಾನಸಭಾ ಸ್ಪೀಕರ್ ಅವರನ್ನು ಕೋರಿದೆ ಎಂದು ಸ್ಪೀಕರ್ ಪರ ವಕೀಲರು ತಿಳಿಸಿದ್ದಾರೆ.
ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್ಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುಧಾ ಎಂಬ ಆರು ಶಾಸಕರನ್ನು ಕಾಂಗ್ರೆಸ್ ವಿಲೀನಗೊಳಿಸುವ ವಿರುದ್ಧ ದಿಲಾವರ್ ಸವಾಲು ಹಾಕಿದ್ದರು. ನ್ಯಾಯಾಲಯದ ಆದೇಶದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.