ಜೋಧ್‌ಪುರ (ರಾಜಸ್ಥಾನ):ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪುಗೆ ಕೇಂದ್ರ ಕಾರಾಗೃಹದ ಹೊರಗಿನಿಂದ ದಿನಕ್ಕೆ ಒಂದು ಬಾರಿ ಆಹಾರ ಪಡೆಯಲು ರಾಜಸ್ಥಾನ ಹೈಕೋರ್ಟ್ ಅವಕಾಶ ನೀಡಿದೆ.
ಹೊರಗಿನಿಂದ ತಂದ ಆಹಾರವನ್ನು ಅಸಾರಾಮ್ ಬಾಪುಗೆ ನೀಡುವ ಮೊದಲು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಹೊರಗಿನ ಆಹಾರ ಸೇವಿಸುವುದರಿಂದ ಅವರ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾದರೂ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಅಸಾರಾಮ್ ಬಾಪುಗೆ ತಿಳಿಸಿದೆ.