ಹಥ್ರಾಸ್:ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣ ವಿಚಾರವಾಗಿ ಉತ್ತರಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಜಿಲ್ಲಾಧಿಕಾರಿ ಸಂತ್ರಸ್ತೆ ಕುಟುಂಬಕ್ಕೆ ಹೇಳಿಕೆ ಬದಲಿಸುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಹಥ್ರಾಸ್ ಸಂತ್ರಸ್ತೆ ಕುಟುಂಬಕ್ಕೆ ಜಿಲ್ಲಾಧಿಕಾರಿ ಬೆದರಿಕೆ? ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳಬೇಡಿ. ಮಾಧ್ಯಮ ಇಂದು ಇರುತ್ತೆ, ನಾಳೆ ಹೋಗುತ್ತದೆ. ನೀವು ಹೇಳಿಕೆಯನ್ನ ಬದಲಾಯಿಸಬೇಕೇ ಅಥವಾ ಬೇಡವೇ ಎಂದು ಮತ್ತೊಮ್ಮೆ ನಿರ್ಧರಿಸಿ ಎಂದು ತಿಳಿಸಿದ್ದಾರೆ.
ಹಥ್ರಾಸ್ ಸಂತ್ರಸ್ತೆ ಮೇಲೆ ಅತ್ಯಾಚಾರವೇ ನಡೆದಿಲ್ಲ: ಯುಪಿ ಎಡಿಜಿ ಪ್ರಶಾಂತ್ ಕುಮಾರ್!
ಸಂತ್ರಸ್ತೆ ಕುಟುಂಬದ ಮನೆಯಲ್ಲಿ ಅಧಿಕಾರಿಗಳು ಕುಳಿತಿದ್ದು, ಮಾಧ್ಯಮಗಳು ಇದೀಗ ಕುರುಡಾಗಿವೆ. ನಾಳೆ ಬೇರೆ ಸುದ್ದಿ ಪ್ರಸಾರ ಮಾಡುತ್ತವೆ. ಆಗ ಉಳಿಯುವುದು ಕೇವಲ 2- 4 ಜನರು ಮಾತ್ರ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಹೇಳಿಕೆ ಬದಲಾಯಿಸಬೇಕೇ? ಅಥವಾ ಬೇಡವೇ ಎಂದು ನಿರ್ಧರಿಸಿ ಎಂದಿದ್ದಾರೆ.
ಸೆಪ್ಟೆಂಬರ್ 14ರಂದು ತನ್ನ ತಾಯಿ ಜತೆ ಸಂತ್ರಸ್ತೆ ಹೊಲಕ್ಕೆ ತೆರಳಿದ್ದಳು. ಈ ವೇಳೆ, ಗ್ರಾಮದ ಕೆಲ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ತದನಂತರ ಕತ್ತು ಹಿಸುಕಲು ಯತ್ನಿಸಿದ್ದಾರೆ. ಜತೆಗೆ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನ ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.