ಗ್ರೇಟರ್ ನೋಯ್ಡಾ:ಉತ್ತರ ಪ್ರದೇಶ ಹಥ್ರಾಸ್ ಸಂತ್ರಸ್ತೆ ಕುಟುಂಬವನ್ನ ಭೇಟಿ ಮಾಡಲು ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಬಂಧಿಸಿ ಬಿಡುಗಡೆ ಮಾಡಲಾಗಿದೆ.
ರಾಹುಲ್, ಪ್ರಿಯಾಂಕಾ ಬಂಧನ, ಬಿಡುಗಡೆ: ದೆಹಲಿಯತ್ತ ಮುಖಮಾಡಿದ ನಾಯಕರು! - ಹಥ್ರಾಸ್ ಪ್ರಕರಣ
ಹಥ್ರಾಸ್ ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
Rahul Gandhi, priyanka Releaded from police
ದೆಹಲಿಯಿಂದ ಹಥ್ರಾಸ್ಗೆ ತೆರಳುತ್ತಿದ್ದ ರಾಹುಲ್, ಪ್ರಿಯಾಂಕಾ ಅವರನ್ನ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ಪ್ರೆಸ್ ವೇ ಹತ್ತಿರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಅವರನ್ನ ಜೆಪಿ ಗೆಸ್ಟ್ ಹೌಸ್ನಲ್ಲಿ ಕೆಲ ಕಾಲ ಬಂಧನದಲ್ಲಿರಿಸಿ, ಇದೀಗ ರಿಲೀಸ್ ಮಾಡಿದ್ದಾರೆ.
ರಿಲೀಸ್ ಮಾಡುತ್ತಿದ್ದಂತೆ ರಾಜಧಾನಿ ನವದೆಹಲಿ ಕಡೆ ವಾಪಸ್ ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯಮುನಾ ಎಕ್ಸ್ಪ್ರೆಸ್ ವೇನಲ್ಲೇ ತಡೆದಿದ್ದ ವೇಳೆ ರಾಹುಲ್ ಗಾಂಧಿ ಮತ್ತು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆದಿತ್ತು.