ಕೈತಾಲ್ (ಹರಿಯಾಣ): ರಾಜ್ಯದಲ್ಲಿ ಬಿಜೆಪಿ-ಜೆಜೆಪಿ ನೇತೃತ್ವದ ಸರ್ಕಾರ ಭತ್ತದ ಕೃಷಿಗೆ ವಿಧಿಸಿರುವ ನಿರ್ಬಂಧಗಳ ವಿರುದ್ಧ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಲಾ ಹರಿಯಾಣದ ಕೈತಾಲ್ ಜಿಲ್ಲೆಯ ಗುಹ್ಲಾ ಚೀಕಾದಲ್ಲಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದರು.
ರೈತರಿಗೆ ತಮ್ಮ ಬೆಂಬಲ ನೀಡಿದ ಸುರ್ಜೆವಾಲಾ, ಹರಿಯಾಣದ ಶ್ರೀಮಂತ ಭತ್ತದ ಬ್ಲಾಕ್ಗಳಲ್ಲಿ ಭತ್ತದ ಕೃಷಿಯನ್ನು ಶೇಕಡಾ 50ರಷ್ಟು ನಿರ್ಬಂಧಿಸುವಂತಹ ಯೋಜನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.